Advertisement

‌Vijayapura; ದರ್ಶನ್ ಸಹಚರ ವಿನಯ್ ದರ್ಗಾ ಜೈಲಿಗೆ ಶಿಫ್ಟ್

03:01 PM Aug 31, 2024 | keerthan |

ವಿಜಯಪುರ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Case) 10ನೇ ಆರೋಪಿಯಾಗಿರುವ ಚಿತ್ರನಟ ದರ್ಶನ (Darshan) ಸಹಚರ ವಿನಯ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವಿಜಯಪುರದ ದರ್ಗಾ ಜೈಲಿಗೆ ಸ್ಥಳಾಂತರಗೊಂಡಿದ್ದಾನೆ.

Advertisement

ದರ್ಶನ ಹಾಗೂ ಸಹಚರರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ದೊರಕಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ ಸೇರಿದಂತೆ ಇತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಹಸ್ತಾಂತರ ಮಾಡಲಾಗಿದೆ.

ಅದರಂತೆ ದರ್ಶನ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಢ ಬೆನ್ನಲ್ಲೇ ಪ್ರಕರಣದ 10ನೇ ಆರೋಪಿ ವಿನಯ ಕೂಡ ದರ್ಗಾ ಜೈಲಿಗೆ ಹಸ್ತಾಂತರ ಆಗಲಿದ್ದಾನೆ ಎಂದು ಕಳೆದ ನಾಲ್ಕು ದಿನಗಳಿಂದ ನಿರೀಕ್ಷೆಯಲ್ಲಿದ್ದರು. ಶುಕ್ರವಾರಷ್ಟೇ ದರ್ಗಾರ ಜೈಲು ಅಧಿಕಾರಿಗಳಿಗೆ ವಿನಯ ಸ್ಥಳಾಂತರದ ಅಧಿಕೃತ ಮಾಹಿತಿ ಲಭ್ಯವಾಗಿತ್ತು. ಕೊನೆಗೂ ಶನಿವಾರ ವಿನಯನನ್ನು ದರ್ಗಾ ಜೈಲಿಗೆ ತಂದು ಬಿಡಲಾಗಿದೆ.

ಇದೀಗ ಶನಿವಾರ ಮಧ್ಯಾಹ್ನ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 10ನೇ ಆರೋಪಿ ವಿನಯನನ್ನು ಪೊಲೀಸ್ ವಾಹನದಲ್ಲಿ ವಿಜಯಪುರದ ದರ್ಗಾ ಜೈಲಿಗೆ ಕರೆ ತಂದಿದ್ದಾರೆ. ಎರಡು ಬ್ಯಾಗ್‍ಗಳೊಂದಿಗೆ ವಿಜಯಪುರ ಜೈಲಿಗೆ ಆಗಮಿಸಿದ ವಿನಯನನ್ನು ಜೈಲಿನ ಕಾನೂನು ಪ್ರಕ್ರಿಯೆ ಮುಗಿಯುತ್ತಲೇ ಜೈಲಿನ ಒಳಗೆ ಪ್ರವೇಶ ಕಲ್ಪಿಸಲಾಯಿತು. ಜೈಲಿನ ನಿಯಮದಂತೆ ವಿನಯ್‍ ಗೆ ಕೈದಿ ಸಂಖ್ಯೆಯನ್ನು ಹೊಸದಾಗಿ ನೀಡಲಾಗುತ್ತದೆ.

ರೇಣುಕಾಸ್ವಾಮಿ ಹತ್ಯೆ ನಡೆದಿರುವ ಪಟ್ಟಣಗೆರೆ ಶೆಡ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ಟೋನಿಬ್ರೂಕ್ ಹೊಟೇಲ್ ಮಾಲೀಕನಾದ ದರ್ಶನ ಆಪ್ತ ವಿನಯ ಕುಟುಂಬದವರಿಗೆ ಸೇರಿದ್ದು ಎಂಬುದು ಗಮನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.