Advertisement

ಮತ್ತೆ ಒಬ್ಬರಿಗೆ ಕೋವಿಡ್ ಸೋಂಕು ದೃಢ

11:58 AM Jul 10, 2020 | Naveen |

ವಿಜಯಪುರ: ಗುರುವಾರ ಪ್ರಕವಾಟದ ವೈದ್ಯಕೀಯ ವರದಿಯಲ್ಲಿ ಜಿಲ್ಲೆಯಲ್ಲಿ ಮತ್ತೆ ಒಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಮತ್ತೂಂದೆಡೆ ಇದೇ ದಿನ 6 ರೋಗಿಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್‌ ಪಾಟೀಲ ತಿಳಿಸಿದ್ದಾರೆ.

Advertisement

ಜಿಲ್ಲಾಸ್ಪತ್ರೆಯಿಂದ ಜಿಲ್ಲೆಯ ರೋಗಿ ಸಂಖ್ಯೆ 59 ವರ್ಷದ ವೃದ್ಧ ಪಿ19996, 60 ವರ್ಷದ ವೃದ್ಧೆ ಪಿ19997 35 ವರ್ಷದ ವ್ಯಕ್ತಿ ಪಿ19999, 60 ವರ್ಷದ ವೃದ್ಧೆ ಪಿ20000, 22 ವರ್ಷದ ಮಹಿಳೆ ಪಿ20007 ಹಾಗೂ 35 ವರ್ಷದ ವ್ಯಕ್ತಿ ಪಿ23205 ಹಾಗೂ ಮೈಸೂರು ಮೂಲದ 35 ವರ್ಷದ ರೋಗಿ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ ಗುರುವಾರ 31 ವರ್ಷದ ವ್ಯಕ್ತಿ ಪಿ29020 ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 621ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 13 ಜನರು ಮೃತಪಟ್ಟಿದ್ದು, 450 ರೋಗಿಗಳು ರೋಗಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ 158 ಸೋಂಕಿತರಿಗೆ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next