Advertisement
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಯಶವಂತ್ರಾಯಗೌಡ, ಇಂಡಿ ಪ್ರತ್ಯೇಕ ಜಿಲ್ಲೆ ರಚನೆ, ಇಂಡಿ, ಸಿಂದಗಿ ತಾಲೂಕಗಳನ್ನು ಸಂವಿಧಾನದ 371 (ಜೆ) ಕಲಂ ವ್ಯಾಪ್ತಿಗೆ ಸೇರ್ಪಡಿಸಿ, ವಿಶೇಷ ಸೌಲಭ್ಯ ಕಲ್ಪಿಸುವುದು, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಕೊನೆ ಭಾಗಕ್ಕೆ ನೀರು ತಲುಪಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಿಎಂ ಸಕಾರಾತ್ಮಕ ಸ್ಪಂದಿಸಿದ್ಧಾಗಿ ಹೇಳಿದ್ದಾರೆ.
Related Articles
Advertisement
ಇದಲ್ಲದೆ ಇಂಡಿ-ಚಡಚಣ ಭಾಗದ ರೈತರ ಮಹತ್ವಾಕಾಂಕ್ಷೆಯ ಹೋರ್ತಿ ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕರೆದಿರುವ ಟೆಂಡರ್ ನಿಧಾನಗತಿಯಲ್ಲಿ ನಡೆದಿದೆ. 2-3ನೇ ಹಂತದ ಕಾಮಗಾರಿಗೆ ಸಮಗ್ರ ಯೋಜನಾ ವರದಿ ರೂಪಿಸಿ, ಕೆಬಿಜೆಎನ್‍ಎಲ್ ಮಂಡಳಿಯಲ್ಲಿ ತುರ್ತಾಗಿ ಒಪ್ಪಿಗೆ ಪಡೆಯಬೇಕು ಎಂಬ ಬೇಡಿಕೆಗೆ ಸಿಎಂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.
ಕ್ಷೇತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆಗೆ ಸೇರಿದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ತ್ವರಿಗೊಳಿಸಬೇಕು. ಹಂಜಗಿ, ಅರ್ಜನಾಳ, ಗೂಗಿಹಾಳ, ಲೋಣಿ ಕೆ.ಡಿ. ಕೆರೆಗಳಿಗೆ ನೀರು ತುಂಬಿಸಬೇಕು. ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಇಂಡಿ, ಸಿಂದಗಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ಭಿಮಾ ನದಿಗೆ ಉಜಿನಿ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಕೃಷಿ-ತೋಟಗಾರಿಕೆ ಬೆಳೆ ಹಾನಿಗೆ ಇನ್‍ಪುಟ್ ಸಬ್ಸಿಡಿ ಹಾಗೂ ಹಾನಿಯ ಪರಿಹಾರ ನೀಡಬೇಕು, ಜಲಧಾರೆ ಯೋಜನೆ ಕಾಮಗಾರಿ ತ್ವರಿತಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗೆ ಮುಖ್ಯಮಂತ್ರಿಗಳು ಸೈ ಎಂದಿದ್ದಾರೆ ಎಂದರು.