Advertisement

ಕಿರುಕುಳದಿಂದ ಅಡುಗೆ ಸಹಾಯಕಿ ಸಾವು : ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

01:16 PM Nov 25, 2020 | sudhir |

ವಿಜಯಪುರ: ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣ ಅಧಿಕಾರಿಗಳ ಕಿರುಕುಳದಿಂದ ಅಡುಗೆ ಸಹಾಯಕಿ ಎಲ್‌.ಜಿ. ಬೋರಮ್ಮ ಮೃತಪಟ್ಟಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು. ಮೃತಳ ಕುಟುಂಬಕ್ಕೆ
ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ
ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Advertisement

ಈ ವೇಳೆ ಗ್ರಾಪಂ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಹೊರ ಗುತ್ತಿಗೆ ಆಧಾರದ ಮೇಲೆ ಎಲ್‌.ಜಿ.ಬೋರಮ್ಮ 9 ವರ್ಷದಿಂದ ಮಾದರಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಬಾಕಿ ವೇತನ ಹಾಗೂ ಕೆಲಸವಿಲ್ಲದೆ ಸಾಲ
ಬಾಧೆಯಿಂದ ಬಳಲುತ್ತಿದ್ದರು. ಆದರೂ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣ ಅಧಿಕಾರಿ ನಿಮ್ಮ ಕೌಟುಂಬಿಕ ಆರ್ಥಿಕ
ಪರಿಸ್ಥಿತಿ ಹಾಗೂ ಸಮಸ್ಯೆಗೂ ಕಚೇರಿ ಕೆಲಸಕ್ಕೂ ಸಂಬಂಧವಿಲ್ಲ. ತಮ್ಮ ಚುಚ್ಚು ಮಾತುಗಳಿಂದ ನಿಂದಿಸಿಸುತ್ತಿದ್ದರು. ಅಧಿಕಾರಿಗಳ ಮಾನಸಿಕ ಹಿಂಸೆಯಿಂದ ನೊಂದ ಬೋರಮ್ಮ ಸಾವನ್ನಪ್ಪಿದ್ದಾರೆ. ಹೀಗಾಗಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ:ಗೋವಾದಲ್ಲಿ ಸೋನಿಯಾ ಗಾಂಧಿ ಸೈಕ್ಲಿಂಗ್: ವಿಡಿಯೋ ವೈರಲ್

ಮೃತಳ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡುವ ಜೊತೆಗೆ ಅವರ ಕುಟುಂಬ ಸದಸ್ಯರಿಗೆ ಅನುಕಂಪ ಆಧಾರದಲ್ಲಿ ಸರ್ಕಾರಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾದ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಕಿರುಕುಳ ನೀಡಿದ ಅಧಿಕಾರಿಯನ್ನು ಅಮಾನತು ಮಾಡಬೇಕು.
ಕ್ರಮ ಕೈಗೊಳ್ಳುವಲ್ಲಿ ವಿಳಂಬವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರಿಗೆ ಮನವಿ ಸಲ್ಲಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸುವಂತೆ ಮನವಿ ಸಲ್ಲಿಸಿದರು. ಪವಾಡೆಪ್ಪ ಚಲವಾದಿ, ಖಾಸಿಂ ಆಲದಾಳ, ಬೋರಕ್ಕ ಬೀಳೂರ, ನೂರಜಾನ್‌ ಯಲಗಾರ, ದಾನಮ್ಮ
ಹೂಗಾರ, ಸುಮಂಗಲಾ ಕಂಬಾರ, ಲಕ್ಷ್ಮಣ ಮಸಳಿ, ಶಿವು ಇಂಡಿ, ನಿಂಗಪ್ಪ ವಾಲೀಕಾರ, ಶಾಂತಾ ಕ್ವಾಟಿ, ಪ್ರಕಾಶ ದೇಸಾಯಿ, ಬೇಬಿ ಹೊಸಮನಿ, ಯಮುನಾ ಭಜಂತ್ರಿ, ವೈಶಾಲಿ ಸಮಗೊಂಡ, ರೂಪಾ ಬಿರಾದಾರ, ಲಕ್ಷ್ಮೀ ಮಂಗಸೂಳಿ, ಮೀನಾಕ್ಷಿ ತಳವಾರ, ಸುಧೀರಾ ರಾಠೊಡ, ಮಾಲಾ ರಾಠೊಡ, ಬಸವರಾಜ ಶಿರಶ್ಯಾಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next