Advertisement

ವಿಜಯಪುರ ಕಲಾವಿದರು ವಿಶ್ವಮಾನ್ಯರು

06:52 PM Apr 16, 2021 | Nagendra Trasi |

ವಿಜಯಪುರ: ಜಾಗತಿಕವಾಗಿ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣುವುದೇ ದೃಶ್ಯ ಭಾಷೆ. ಇಂಥ ಕಲೆಯ ಭಾಷೆಯ ಮೂಲಕವೇ ಐತಿಹಾಸಿಕ ಜಿಲ್ಲೆಯ ಕಲಾವಿದರು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ್ದಾರೆ ಎಂದು ಪತ್ರಕರ್ತ ಈರಣ್ಣ ಗೌಡರ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಹಯೋಗದಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕಲಾಕೃತಿಗಳ ಪ್ರದರ್ಶನ ಮತ್ತು ರೇಖಾಚಿತ್ರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಾವಿದರು ಒಂದೆಡೆ ಸೇರಿ ಕೃತಿ ರಚಿಸುವುದು ಪ್ರದರ್ಶನ ಮಾಡುವುದು ಶ್ಲಾಘನೀಯ. ದೃಶ್ಯಕಲಾ ದಿನಾಚಾರಣೆ ನೆಪದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯವ್ಯಾಪ್ತಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ಕಲಾ ಕ್ಷೇತ್ರದ ಅತ್ಯಂತ ಆರೋಗ್ಯಕರ ಬೆಳವಣಿಗೆ ಎಂದು ಬಣ್ಣಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉದ್ಯಮಿ ನಾಗೇಶ ಶೆಟ್ಟಿ, ಕಲಾವಿದರು ಈ ದೇಶದ ಸಂಸ್ಕೃತಿಯ ಪ್ರತೀಕ. ಹೀಗಾಗಿ ಹಿಂದೆಲ್ಲ ಕಲಾವಿದರಿಗೆ‌ ಮೊದಲು ರಾಜಾಶ್ರಯ ಇತ್ತು. ಆದರೆ ಇಂದು ಸರಕಾರ, ಕಾರ್ಪೋರೇಟ್‌ ಸಂಸ್ಥೆಗಳು, ಉದ್ಯಮಿಗಳು ಕಲಾವಿದರಿಗೆ ಸಹಕಾರ ನೀಡುತ್ತಿದ್ದಾರೆ. ಇದು ಹೀಗೆ ಮುಂದುವರಿಯಲಿ ಎಂದರು.

ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜು ಪ್ರಾಚಾರ್ಯ ಡಾ ಸದಾಶಿವ ಪವಾರ ಮಾತನಾಡಿ, ವಿಜಯಪುರ ಜಿಲ್ಲೆ ಕಲೆ-ಸಾಹಿತ್ಯ-ಸಂಸ್ಕೃತಿ ಅತ್ಯಂತ ಸಂಪತದ್ಭರಿತವಾಗಿದೆ. ಪಾರಂಪರಿಕವಾಗಿ ವಿಶಿಷ್ಟ ವಾಸ್ತು ಶೈಲಿಯ ಅಂತರ ರಾಷ್ಟ್ರಿಯ ಸ್ಮಾರಕ ಹೊಂದಿರುವ ವಿಜಯಪುರ ಜಿಲ್ಲೆ ಕಲಾವಿದರಿಗೆ ನೀಡಿದ್ದ ಆದ್ಯತೆಯ ಪ್ರತೀಕವಾಗಿದೆ. ಇಂತ ನೆಲದಲ್ಲಿ ಚಿತ್ರಕಲಾ ಗ್ಯಾಲರಿ ನಿರ್ಮಾಣವಾಗಿದ್ದು, ಅಂತಾರಾಷ್ಟ್ರಿಯ ಮಟ್ಟದ ಮನ್ನಣೆ ಗಳಿಸಲಿ. ಈ ನೆಲದ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವೇಶ್ವರಯ್ಯ ಮಠಪತಿ ಮಾತನಾಡಿ, ಸರಕಾರ ಎಲ್ಲ ಪ್ರಾಥಮಿಕ ಮತ್ತು ಪೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಮಾಡಬೇಕು ಎಂದರು. ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು ಬಾಲ್ಯದಲ್ಲೆ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮನವರಿಕೆಯಾಗುತ್ತದೆ. ಚಿತ್ರಕಲೆಗೆ ಸರಕಾರ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

Advertisement

ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ದೃಶ್ಯಕಲೆ ವಿಶ್ವಭಾಷೆಯಾಗಿದೆ. ವಿಶ್ವ ವಿಖ್ಯಾತ ಕಲಾವಿದ ಲಿಯೋನಾಡೋ ಡಾವಿಂಚಿ ಅವರ ಜನ್ಮದಿನದ ಪ್ರಯುಕ್ತ ಇಡೀ ಜಗತ್ತು ದೃಶ್ಯಕಲಾ ದಿನಾಚರಣೆ ಆಚರಿಸುತ್ತಿದೆ ಎಂದು ವಿವರಿಸಿದರು.

ಹಿರಿಯ ಕಲಾವಿದರಾದ ಸುಭಾಸ ಕೆಂಭಾವಿ, ಡಾ.ಜಿ.ಎಸ್‌. ಭೂಸಗೊಂಡ, ಕೆ.ಗಂಗಾಧರ, ವಿ.ವಿ. ಹಿರೇಮಠ, ಶಿವಣ್ಣ ಗೊಳಸಂಗಿ, ಯಾಮಿನಿ ಶಹಾ, ಶಿವಾನಂದ ಅಥಣಿ, ವಿ.ಜಿ.ಪಟ್ಟಣಶೆಟ್ಟಿ, ಪರಶುರಾಮ ಅಳಗುಂಡಗಿ, ಮಹಾದೇವ ಕೋರಿಶೆಟ್ಟಿ, ಲಿಂಗರಾಜ ಕಾಚಾಪುರ, ದಯಾನಂದ ಪರಮಾಜ, ಗಂಗಾಧರ ಮಾಯಾಚಾರಿ, ಅಯ್ನಾಜ ಪಟೇಲ್‌ ಮತ್ತು ಜಿಲ್ಲೆಯ ಎಲ್ಲ ಚಿತ್ರಕಲಾ ಶಿಕ್ಷಕರು, ಕಲಾವಿದರು, ಶ್ರೀಸಿದ್ದೇಶ್ವರ ಕಲಾ ಶಾಲೆಯ ವಿದ್ಯಾರ್ಥಿಗಳು ಇದ್ದರು. ಇದೇ ಸಂದರ್ಭದಲ್ಲಿ ಜರುಗಿದ ರೇಖಾಚಿತ್ರ ಕಾರ್ಯಾಗಾರದಲ್ಲಿ ಜಿಲ್ಲೆಯ 70 ಕಲಾವಿದರು ಕಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆನಂದ ಝಂಡೆ ನಿರೂಪಿಸಿದರು. ರ್‌.ವಿ.ಭುಜಂಗನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next