Advertisement

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

05:56 PM Nov 26, 2024 | keerthan |

ವಿಜಯಪುರ: ಆರು ವರ್ಷದ ಅಪ್ರಾಪ್ತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಪರಾಧಿಯೊಬ್ಬನಿಗೆ ವಿಜಯಪುರದ ಪೋಕ್ಸೋ ನ್ಯಾಯಾಲಯವು 20 ವರ್ಷ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

Advertisement

ಬಸವನ ಬಾಗೇವಾಡಿ ತಾಲೂಕಿನ ಗ್ರಾಮವೊಂದರ ನಿವಾಸಿ, ಸಂತ್ರಸ್ತನ ಸಂಬಂಧಿಯಾದ 21 ವರ್ಷದ ಆರೋಪಿಯೇ ಶಿಕ್ಷೆಗೆ ಗುರಿಯಾದಾತ.

2023ರ ಸೆಪ್ಟೆಂಬರ್ 16ರಂದು ಬಾಲಕ ಅಂಗನವಾಡಿಯಿಂದ ಸಂಜೆ ಮನೆಗೆ ಬಂದು ಆಟವಾಡುತ್ತಿದ್ದ. ಈ ವೇಳೆ, ಬಾಲಕನಿಗೆ ಆರೋಪಿ ಕುರುಕಲು ತಿಂಡಿ ಕೊಡಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರಿಂದ ಸಂತ್ರಸ್ತನಿಗೆ ರಕ್ತಸ್ರಾವವಾಗಿತ್ತು. ಕೆಲಸದಿಂದ ಮನೆಗೆ ಬಂದ ತಾಯಿ ಬಳಿ ಬಾಲಕ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಸಂತ್ರಸ್ತನ ತಾಯಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ ರಾಮನಾಯಕ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ವಿ.ಜಿ.ಹಗರಗುಂಡ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next