Advertisement

ವಿಜಯನಗರ : ಕಾನಿಪ ತಾಲ್ಲೂಕು ಪದಾಧಿಕಾರಿಗಳ ಅವಿರೋಧ ಆಯ್ಕೆ

09:37 PM Jul 10, 2022 | Team Udayavani |

ಹೊಸಪೇಟೆ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲೆಯ ಐದು ತಾಲ್ಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರ ಮಾರ್ಗದರ್ಶನಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು, ಸರ್ವ ಸದಸ್ಯರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ.ಲಕ್ಷ್ಮಣ, ಖಜಾಂಚಿ ಅನಂತ್ ಜೋಶಿ, ಜಿಲ್ಲಾ ಉಪಾಧ್ಯಕ್ಷರಾದ ಉಜ್ಜನಿ ರುದ್ರಪ್ಪ, ಹುಡೇಂ ಕೃಷ್ಣಮೂರ್ತಿ ಸಹ ಕಾರ್ಯದರ್ಶಿ ಪ್ರಕಾಶ್ ಹಾಗೂ‌ ಮಾಜಿ ಅಧ್ಯಕ್ಷ ವೆಂಕೋಬ ನಾಯಕ ಪೂಜಾರಿ ಅವರು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತಾಲ್ಲೂಕುವಾರು ಪದಾಧಿಕಾರಿಗಳ ವಿವರ ಹೀಗಿದೆ.

ಕೊಟ್ಟೂರು:
ಕಾನಿಪ ಕೊಟ್ಟೂರು ತಾಲ್ಲೂಕು ಅಧ್ಯಕ್ಷರಾಗಿ ಕೊರವರ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಮಂಜುನಾಥ್, ಉಪಾಧ್ಯಕ್ಷರಾಗಿ ಡಿ.ಸಿದ್ದಪ್ಪ, ಖಜಾಂಚಿಯಾಗಿ ಎಸ್.ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ಎಚ್.ನಾಗರಾಜ.

ಹಗರಿಬೊಮ್ಮನಹಳ್ಳಿ:
ಕಾನಿಪ ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಉಮಾಪತಿ ಶೆಟ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಭೀಮರಾಜ್, ಉಪಾಧ್ಯಕ್ಷರಾಗಿ ಸುರೇಶ್ ಯಳಕಪ್ಪನವರ್, ಖಜಾಂಚಿಯಾಗಿ ಉಮೇಶ್ ನೆಲಕುದರೆ, ಸಹ ಕಾರ್ಯದರ್ಶಿಯಾಗಿ ರಾಜಾವಲಿ.

ಕೂಡ್ಲಿಗಿ :
ಕಾನಿಪ ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ ಶ್ರೀ ಮಯೂರ ಮಂಜುನಾಥ್ ಮತ್ತು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆರಾಧ್ಯ ಸೋಮಶೇಖರ್, ಉಪಾಧ್ಯಕ್ಷರನ್ನಾಗಿ ಶ್ರೀ ಕೆ.ಸುನೀಲ್ ಗೌಡ, ಖಜಾಂಚಿಯಾಗಿ ಹೆಚ್ ವೀರಣ್ಣ, ಸಹ ಕಾರ್ಯದರ್ಶಿಯಾಗಿ ಕೆ.ಎಂ ವೀರೇಶ.

Advertisement

ಹೂವಿನಹಡಗಲಿ :
ಕಾನಿಪ ಹೂವಿನಹಡಗಲಿ ತಾಲ್ಲೂಕು ಅಧ್ಯಕ್ಷರಾಗಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಅಶೋಕ್, ಉಪಾಧ್ಯಕ್ಷರಾಗಿ ಎಸ್.ಅಶ್ವಥ್ ನಾರಾಯಣ, ಖಜಾಂಚಿಯಾಗಿ ಎಸ್.ಎಂ.ಬಸವರಾಜ, ಸಹ ಕಾರ್ಯದರ್ಶಿಯಾಗಿ ಎಚ್.ಚಂದ್ರಪ್ಪ.

ಹರಪನಹಳ್ಳಿ :
ಕಾನಿಪ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ತಳವಾರ್ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ದೇವೇಂದ್ರಪ್ಪ, ಉಪಾಧ್ಯಕ್ಷರಾಗಿ ಎ.ನಾಗೇಂದ್ರಪ್ಪ, ಖಜಾಂಚಿಯಾಗಿ ಸುರೇಶ್ ಮಂಡಕ್ಕಿ, ಸಹ ಕಾರ್ಯದರ್ಶಿಯಾಗಿ ಎಸ್.ರವಿ.

Advertisement

Udayavani is now on Telegram. Click here to join our channel and stay updated with the latest news.

Next