Advertisement

ಮೈಸೂರು ಬ್ಯಾಂಕ್‌ ಬಳಿ ವಿಜಯನಗರ ಹೆಬ್ಟಾಗಿಲು ಶೀಘ್ರ

11:33 AM Nov 15, 2017 | |

ಬೆಂಗಳೂರು: ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಒಂದು ವರ್ಷದೊಳಗೆ ನಾಡಿನ ಪರಂಪರೆಯನ್ನು ಸಾರುವ ವಿಜಯನಗರ ಹೆಬ್ಟಾಗಿಲು ನಿರ್ಮಿಸಲಾಗುವುದು ಎಂದು ಮೇಯರ್‌ ಸಂಪತ್‌ ರಾಜ್‌ ತಿಳಿಸಿದರು. 

Advertisement

ಮಂಗಳವಾರ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರೊಂದಿಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಮೈಸೂರು ಬ್ಯಾಂಕ್‌ ವೃತ್ತ ಅನೇಕ ಕನ್ನಡಪರ ಚಳವಳಿಗಳಿಗೆ ಸಾಕ್ಷಿಯಾಗಿದೆ.

ಅದನ್ನು ಚಿರಸ್ಥಾಯಿಯಾಗಿಸಲು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವಂತಹ ಹೆಬ್ಟಾಗಿಲನ್ನು ಅಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಹೆಬ್ಟಾಗಿಲಿನ ನಕ್ಷೆ ಸಿದ್ದಪಡಿಸಲು ಸೂಚಿಸಲಾಗಿದೆ. ಶೀಘ್ರ ಗುದ್ದಲಿ ಪೂಜೆ ನೆರವೇರಲಿದೆ ಎಂದರು.

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಮಾತನಾಡಿ, ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಕನ್ನಡ ಭಾಷೆ ನೆಲ, ಜಲ ಉಳಿಸುವಂತಹ ಅನೇಕ ಹೋರಾಟಗಳು ನಡೆದಿದೆ. ಹಾಗಾಗಿ, ಶಾಶ್ವತವಾಗಿ ವಿಜಯನಗರ ಹೆಬ್ಟಾಗಿಲನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು. 

ತ್ವರಿತ ಕಾಮಗಾರಿಗೆ ಸೂಚನೆ: ನಂತರ ಮೇಯರ್‌ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ನಾಗವಾರ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಥಣಿಸಂದ್ರ ಸೇರಿದಂತೆ ಹಲವು ವಾರ್ಡ್‌ಗಳಿಗೆ ಭೇಟಿ ನೀಡಿ ರಸ್ತೆ ಡಾಂಬರೀಕರಣ, ಜಲಮಂಡಳಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಹಳೆಯದಾದ ಒಳಚರಂಡಿ ಕೊಳವೆಯನ್ನು 200 ಸುತ್ತಳತೆಯಿಂದ 300 ಸುತ್ತಳತೆ ಗಾತ್ರದ ಪೈಪ್‌ ಬದಲಾಯಿಸಿ ಶೀಘ್ರವಾಗಿ ಕಾಮಗಾರಿ ಕಾರ್ಯ ಮುಗಿಸುವಂತೆ ಆದೇಶಿಸಿದರು.

Advertisement

ಉದ್ದೇಶಿತ ಈ ವಾರ್ಡ್‌ಗಳಲ್ಲಿ ಒಳಚರಂಡಿಗಳು ತೀರ ಹಳೆಯದಾಗಿದ್ದು, ಆಗಾಗ್ಗೆ ಪೈಪ್‌ ಸೋರಿಕೆ ಇತರೆ ಸಮಸ್ಯೆಗಳು ಎದುರಾಗಿದೆ ಎಂದು ದೂರು ಬಂದ ಹಿನ್ನೆಲೆ ತಪಾಸಣೆ ಕೈಗೊಂಡು, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ಲಿಂಗತ್ವ ಅಲ್ಪಸಂಖ್ಯಾತರಿಗೆ ಬಸ್‌ಪಾಸ್‌: ಲಿಂಗತ್ವ ಅಲ್ಪಸಂಖ್ಯಾತರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಮಾಸಿಕ ಪಾಸು ವಿತರಣೆಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮೇಯರ್‌ ಸಂಪತ್‌ ರಾಜ್‌ ತಿಳಿಸಿದರು. 

ಮಂಗಳವಾರ ಬಿಬಿಎಂಪಿ ಪೂರ್ವ ವಲಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ನಡೆದ ಸಭೆಯಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ ನಮಗೆ ನಿತ್ಯ ಓಡಾಡಲು ಮಾಸಿಕ ಪಾಸು ವಿತರಿಸಿಲ್ಲ ಎಂದು ಲಿಂಗತ್ವ ಅಲ್ಪಸಂಖ್ಯಾತರು ಮೇಯರ್‌ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಮೇಯರ್‌, ಈಗಾಗಲೇ ಬಿಎಂಟಿಸಿ ಅಧ್ಯಕ್ಷರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next