Advertisement

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

02:40 PM Oct 17, 2021 | Team Udayavani |

ಹುಮನಾಬಾದ: ಕಳೆದ ವರ್ಷಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿಆಚರಣೆ ಮಾಡಿದ ವಿಜಯದಶಮಿ ಹಬ್ಬ ಈ ವರ್ಷ ಪಟ್ಟಣದಲ್ಲಿಸಂಭ್ರಮದಿಂದ ಆಚರಿಸಲಾಯಿತು.ವಿಜಯ ದಶಮಿ ನಿಮಿತ್ತ ಬಾಲಾಜಿವೃತ್ತದಲ್ಲಿ 25ಕ್ಕೂ ಅಧಿಕ ಅಡಿ ಎತ್ತರದರಾವಣನ ಪ್ರತಿಕೃತಿ ನೋಡುಗರ ಗಮನ ಸೆಳೆಯಿತು.

Advertisement

ಕಳೆದ 20 ದಿನಕ್ಕೂ ಹೆಚ್ಚಿನಅವಧಿಯಲ್ಲಿ ಇಲ್ಲಿನ ಯುವಕರುರಾವಣನ ಪ್ರತಿಕೃತಿ ತಯಾರಿಸಿದ್ದು,ಶುಕ್ರವಾರ ಬೆಳಗ್ಗೆ ಸಾರ್ವಜನಿಕಪ್ರದರ್ಶನಕ್ಕೆ ಇರಿಸಲಾಗಿತ್ತು. ಸಂಜೆಹೊತ್ತಿಗೆ ಹಬ್ಬದ ನಿಮಿತ್ತ ಪಟ್ಟಣದಕುಲದೇವರಾದ ಶ್ರೀ ವೀರಭದ್ರೇಶ್ವರದೇವಸ್ಥಾನದಿಂದ ವೀರಭದ್ರನ ಪಲ್ಲಕ್ಕಿಮೆರವಣಿಗೆ ನಡೆಯಿತು.

ಪಟ್ಟಣದಭಾವಸಾರ ಸಮಾಜದ ಭವಾನಿ ಮಾತಾಪಲ್ಲಕ್ಕಿ, ಬಾಲಾಜಿ ವೃತ್ತದಲ್ಲಿ ಶ್ರೀರಾಮನಪಲ್ಲಕ್ಕಿ ಹಾಗೂ ರಾವಣನ ಪ್ರತಿಕೃತಿಮೆರವಣಿಗೆ ಸರತಿ ಸಾಲಿನಲ್ಲಿ ಪಟ್ಟಣದಪ್ರಮುಖ ರಸ್ತೆಗಳಲ್ಲಿ ಸಾಗಿತು.ಪಟ್ಟಣದ ಹಿರೇಮಠ ಸಂಸ್ಥಾನದವೀರ ರೇಣುಕ ಗಂಗಾಧರಶಿವಾಚಾರ್ಯರು, ಸ್ಥಳೀಯ ಶಾಸಕರಾಜಶೇಖರ ಪಾಟೀಲ್‌, ವಿಧಾನಪರಿಷತ್‌ ಸದಸ್ಯ ಡಾ| ಚಂದ್ರಶೇಖರಪಾಟೀಲ, ವೀರಣ್ಣಾ ಪಾಟೀಲ ಸೇರಿದಂತೆಅನೇಕ ರಾಜಕೀಯ ಮುಖಂಡರು,ಅಧಿಕಾರಿಗಳು ಪಟ್ಟಣದ ಸಾವಿರಾರುಜನರು ಭವ್ಯ ಮೆರವಣಿಗೆಯಲ್ಲಿಭಾಗವಹಿಸಿದ್ದರು.

ಪಟ್ಟಣದ ರಥಮೈದಾನದಲ್ಲಿ ರಾವಣ ಪ್ರತಿಕೃತಿ ದಹನರಾಮಲೀಲಾ ಹಾಗೂ ಸಿಡಿಮದ್ದುಗಳಪ್ರದರ್ಶನ ಏರ್ಪಡಿಸಲಾಗಿತ್ತು.ರಾವಣ ದಹನಕ್ಕೂ ಮುನ್ನರಾಮನ ಯುವಕರ ತಂಡವೊಂದುಹಾಗೂ ರಾವಣನ ಯುವಕರತಂಡವೊಂದು ರಚಿಸಿಕೊಂಡು ಪರಸ್ಪರಸಂವಾದ ನಡೆಸಿ, ರಾಮನ ಕಡೆಯತಂಡದವರು ರಾವಣನಿಗೆ ಖಡ್ಗದಿಂದಹೊಡೆಯುವ ಮೂಲಕ ವಿಜಯದದಶಮಿ ಆಚರಿಸಿದರು.

ನಂತರಪಟಾಕಿ ಸಿಡಿಮದ್ದುಗಳಿಂದ ರಾತ್ರಿ10ರ ಸಮಯಕ್ಕೆ ರಾವಣ ಪ್ರತಿಕೃತಿದಹನ ಮಾಡಲಾಯಿತು. ಸಾವಿರಾರೂಸಂಖ್ಯೆಯಲ್ಲಿ ಜನರು ಸೇರಿದರು.ಹಬ್ಬದ ನಿಮಿತ್ತ ಪಟ್ಟಣದ ಭವಾನಿದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತುಜನರು ದೇವಿ ದರ್ಶನ ಪಡೆದರು.ಆರ್ಯ ಸಮಾಜ, ಪಟ್ಟಣದಜೇರಪೇಟ್‌ ಬಡಾವಣೆಯಿಂದಶೋಭಾ ಯಾತ್ರೆ ನಡೆಸಿ ಹಬ್ಬ ಆಚರಣೆಮಾಡಿದರು. ನಂತರ ಪರಸ್ಪರ ಬನ್ನಿವಿನಿಮಯ ಮಾಡಿಕೊಂಡು ಹಬ್ಬದಶುಭಾಶಯ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next