Advertisement

ವೀರಪುತ್ರನ ಗೆಟಪ್‌ನಲ್ಲಿ ವಿಜಯ್‌ ಸೂರ್ಯ

03:43 PM Nov 17, 2020 | Suhan S |

“ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಟ ವಿಜಯ್‌ ಸೂರ್ಯ, ನಂತರ ನಿಧಾನವಾಗಿ ಹಿರಿತೆರೆಯತ್ತ ಮುಖ ಮಾಡಿದ ನಟ. “ಇಷ್ಟಕಾಮ್ಯ’, “ಸ’, “ಕದ್ದುಮುಚ್ಚಿ’ ಚಿತ್ರಗಳ ಮೂಲಕ ಸಿನಿಪ್ರಿಯರ ಮುಂದೆಕಾಣಿಸಿಕೊಂಡಿದ್ದ ವಿಜಯ್‌ ಸೂರ್ಯ, ಈಗ “ವೀರಪುತ್ರ’ ಚಿತ್ರದ ಮೂಲಕ ಮತ್ತೂಮ್ಮೆ ಬಿಗ್‌ ಸ್ಕ್ರೀನ್‌ ಮೇಲೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

ಇದನ್ನೂ ಓದಿ :ರಿಚ್ಚಿ ಫ‌ಸ್ಟ್‌ ಸಾಂಗ್‌ ರಿಲೀಸ್‌

ಹೌದು, ವಿಜಯ್‌ ಸೂರ್ಯ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ವೀರಪುತ್ರ’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದು, ಹಾಡುಗಳ ಸಂಯೋಜನೆ ಮತ್ತು ಮುದ್ರಣ ಕಾರ್ಯಗಳು ಭರದಿಂದ ಸಾಗಿದೆ.ಕಳೆದ ವರ್ಷ ಬಿಡುಗಡೆಯಾದ “ಸಪ್ಲಿಮೆಂಟರಿ’ ಚಿತ್ರದ ನಿರ್ಮಾಪಕ ಗುರು ಬಂಡಿ ಹಾಗೂ ನಿರ್ದೇಶಕ ಡಾ. ದೇವರಾಜ್‌ ಅವರ ಕಾಂಬಿನೇಶನ್‌ನಲ್ಲಿ “ವೀರಪುತ್ರ ‘ ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ “ವೀರಪುತ್ರ’ ಚಿತ್ರದ ಮೊದಲ ಪ್ರೋಮೊ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ಇದೇ ಡಿಸೆಂಬರ್‌ನಲ್ಲಿ “ವೀರಪುತ್ರ’ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next