ನಾಡಿನ ಕಲೆ, ಸಂಸ್ಕೃತಿ, ಆಚರಣೆ ಬಿಂಬಿಸುವ ಅನೇಕ ಚಿತ್ರಗಳು ಬಂದಿವೆ. ಈಗ ಅದೇ ಸಾಲಿಗೆ ಹೊಸದಾಗಿ “ರುದ್ರಾಭಿಷೇಕಂ’ ಸಿನಿಮಾ ಸೇರ್ಪಡೆಯಾಗುತ್ತಿದೆ.
ನಟ ವಿಜಯ ರಾಘವೇಂದ್ರ ಚಿತ್ರದಲ್ಲಿ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇತ್ತೀಚೆಗೆ ದೇವನಹಳ್ಳಿ ಸಮೀಪದ ವಿಜಯಪುರ ಫಾರಂಹೌಸ್‌ನಲ್ಲಿ ಚಿತ್ರದ ಮುಹೂರ್ತ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ರಾಘವೇಂದ್ರ, “ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ಅನಾವರಣಗೊಳಿಸುವ ಕಥೆಯಿದು. ಕಮರ್ಷಿಯಲ್ ಜೊತೆಗೆ ಭಕ್ತಿಯ ಅಂಶಗಳು
ಇಲ್ಲಿವೆ.ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಥಾಹಂದರ ತಯಾರಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್‌ಗ್ಳಿವೆ ಎಂದರು.
ವಸಂತ್ ಕುಮಾರ್ ಈ ಚಿತ್ರದ ನಿರ್ದೇಶಕರು. “ನಾನು ಕಳೆದ ಎರಡುವರೆ ದಶಕದಿಂದ ಚಿತ್ರರಂಗದಲ್ಲಿ ದ್ದೇನೆ. ಇದೊಂದು ಸಾಂಪ್ರದಾಯಿಕ ವಿಷಯ. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ವಸಂತ್ ಕುಮಾರ್.
ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.