ಚನ್ನಮ್ಮನ ಕಿತ್ತೂರು: ಬೊಂಬೆ ಹೇಳತೈತಿ ನೀನೇ ರಾಜಕುಮಾರ… ಬೆಳಗ್ಗೆ ಎದ್ದು ಯಾರ ಮುಖವು ನಾನು ನೋಡಿದೆ… ಎಂಬ ಟಾಪ್ ಹಾಡುಗಳಿಗೆ ಕಿತ್ತೂರಿನ ಜನತೆ ಹುಚ್ಚೆದ್ದು ಕುಣಿಯುವ ಮೂಲಕ ಕಿತ್ತೂರು ಉತ್ಸವಕ್ಕೆ ಮೆರಗು ತಂದರು.
ಕನ್ನಡದ ಖ್ಯಾತ ಗಾಯಕ ವಿಜಯಪ್ರಕಾಶ ಅವರು ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂಗೀತ ಲೋಕವನ್ನೇ ಅನಾವರಣಗೊಳಿಸಿದರು. ವಿಜಯಪ್ರಕಾಶ ಹಾಡಿಗೆ ಕಿತ್ತೂರಿನ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಕೋಟೆ ಆವರಣದಲ್ಲಿ ಹಾಕಿದ್ದ ಭವ್ಯ ವೇದಿಕೆ ಮೇಲೆ ವಿಜಯಪ್ರಕಾಶ ಅವರ ಹಾಡಿಗೆ ಜನರು ತಲೆದೂಗಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸಾಗರವನ್ನು ಸಂಗೀತ ಲೋಕದಲ್ಲಿ ಕರೆದೊಯ್ದರು. ಕಿಕ್ಕಿರಿದ್ದು ಸೇರಿದ್ದ ಜನ ಸಾಗರ ಪ್ರತಿಯೊಂದು ಹಾಡಿಗೂ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿತ್ತು.
ಇದನ್ನೂ ಓದಿ:ಪಾಕ್ ಪ್ರಚಂಡ ಪ್ರದರ್ಶನ; ಭಾರತ ಪರಾಭವ
ತರವಲ್ಲ ತಗಿ ನಿನ್ನ ತಂಬೂರಿ ಹಾಡಿಗಂತೂ ಜನರು ಸಾಂಪ್ರದಾಯಿಕವಾಗಿ ಹೆಜ್ಜೆ ಹಾಕಿದರು. ಕಣ್ಣು ಹೊಡಿಯಾಕ ಮೊನ್ನೆ ಕಲತೇನಿ… ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನೂ ಮಾಡಲಿ ಬಡವನಯ್ಯ… ಕೋಟಿಗೊಬ್ಬ ಚಿತ್ರದ ಪಟಾಕಿ… ಡಾ.ರಾಜಕುಮಾರ ಹಾಡಿದ ಬಾನಿಗೊಂದು ಎಲ್ಲೆ ಎಲ್ಲಿದೆ… ಯಾವ ಕವಿಯ ಬರೆಯಲಾರ… ಹೀಗೆ ವಿವಿಧ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.