Advertisement

ಮಲ್ಯ ಕೈ ತುಂಬಾ ರಕ್ತದ ಕಲೆ

09:25 AM Jun 20, 2018 | Karthik A |

ಹೊಸದಿಲ್ಲಿ: ತಲೆಮರೆಸಿಕೊಂಡು ಓಡಾಡುತ್ತಿರುವ ಕಿಂಗ್‌ ಫಿಶರ್‌ ಕಂಪನಿ ಮಾಲಕ ವಿಜಯ್‌ ಮಲ್ಯ ವಿರುದ್ಧ ಸಿಟ್ಟಿಗೆದ್ದಿರುವ ಅದರ ಸಿಬಂದಿ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಖಾರವಾಗಿ ಪತ್ರ ಬರೆದಿದ್ದು, ಈ ಕೂಡಲೇ ಮಲ್ಯರನ್ನು ಹಿಡಿದು ತನ್ನಿ ಎಂದು ಆಗ್ರಹಿಸಿದ್ದಾರೆ. ಕಿಂಗ್‌ ಫಿಶರ್‌ ಕಂಪೆನಿಯ ಸಿಬಂದಿಗೆ ವೇತನ ನೀಡದೇ ಸತಾಯಿಸಿದ್ದರಿಂದ ಇಲ್ಲಿನ ಕಾರ್ಮಿಕರೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ‘ಮಲ್ಯ ಕೈ ತುಂಬಾ ರಕ್ತದ ಕಲೆ’ಗಳೇ ತುಂಬಿವೆ. ಅಲ್ಲದೆ, ಈ ಪ್ರಕರಣ ಸಂಬಂಧ ಮಲ್ಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಬಹುದಾಗಿದೆ ಎಂದು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement

ಮೋದಿ ಸರಕಾರದ ವಿದೇಶಾಂಗ ನೀತಿ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿರುವ ಸಿಬಂದಿ, ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡು ಹೋಗಿರುವ ಈ ತಪ್ಪಿತಸ್ಥರನ್ನು ಬಿಡಲೇಬೇಡಿ ಎಂದೂ ಹೇಳಿದ್ದಾರೆ. ಇದಷ್ಟೇ ಅಲ್ಲ, ಅಂದು ಮಲ್ಯ ಮಾಡಿರುವ ತಪ್ಪಿಗಾಗಿ ನಾವು ಇಂದಿಗೂ ನೋವು ಅನುಭವಿಸುತ್ತಿದ್ದೇವೆ. ಇನ್ನೂ ನಮ್ಮ ಪಾಲಿನ ಆದಾಯ ತೆರಿಗೆ ಕಟ್ಟಿಲ್ಲ. ಹೀಗಾಗಿ ನೋಟಿಸ್‌ ಪಡೆಯುತ್ತಲೇ ಇದ್ದೇವೆ. ಇಷ್ಟೆಲ್ಲಾ ಮಾಡಿದರೂ, ದೊಡ್ಡವರ ಸಹಕಾರದಿಂದ ಮಲ್ಯ ತಪ್ಪಿಸಿಕೊಂಡು ಹೋಗಿದ್ದಾರೆ. ಇನ್ನು ಮುಂದಾದರೂ ಇಂಥ ಅಕ್ರಮಗಳನ್ನು ತಡೆಗಟ್ಟಿ ಎಂದು ಆಗ್ರಹಿಸಿದ್ದಾರೆ.

RCBಗೆ ಹಣ ವರ್ಗ: ಈ ನಡುವೆ, ಮಲ್ಯ ಅವರು ಮೋಸದಿಂದ 3,700 ಕೋಟಿ ರೂ.ಗಳನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಯುಕೆ ಮೂಲದ ಎಫ್1 ಮೋಟಾರ್‌ನ್ಪೋರ್ಟ್‌ ಸಂಸ್ಥೆಗೆ ವರ್ಗಾಯಿಸಿದ್ದರು ಎಂದು ಇ.ಡಿ. ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದೆ. ಜತೆಗೆ, ಮಲ್ಯ ತಮ್ಮ ಒಟ್ಟಾರೆ ಆಸ್ತಿ ಮೌಲ್ಯವನ್ನು 1,395 ಕೋಟಿ ರೂ. ಎಂದು ಹೇಳಿದ್ದರಾದರೂ, ಅವರ ನೈಜ ಆಸ್ತಿ 3,164 ಕೋಟಿ ರೂ. ಆಗಿತ್ತು ಎಂದೂ ಇ.ಡಿ. ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next