ನವದೆಹಲಿ: ಸದ್ಯ ಬಾಗಿಲು ಮುಚ್ಚಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಮಾಲೀಕ ವಿಜಯ ಮಲ್ಯಗೆ ಸಾಲ ನೀಡುವಲ್ಲಿ ಐಡಿಬಿಐ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷ ಯೋಗೇಶ್ ಅಗರ್ವಾಲ್ ಆರ್‌ಬಿಐನ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂ ಸಿದ್ದಾರೆ. ಈ ಬಗ್ಗೆ ಸುದ್ದಿವಾಹಿನಿಯೊಂದು ವರದಿ ಮಾಡಿದೆ. 2009ರ ಅ.1ರಂದು 750 ಕೋಟಿ ರೂ. ಸಾಲ ಬೇಕೆಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲೇ ಸಂಸ್ಥೆ ಅಧ್ಯಕ್ಷ ವಿಜಯ ಮಲ್ಯರು ಯೋಗೇಶ್ ಅಗರ್ವಾಲ್‌ರನ್ನು ಅ.6ರಂದು ಭೇಟಿ ಮಾಡಿ ಅಲ್ಪ ಕಾಲಕ್ಕಾಗಿ 150 ಕೋಟಿ ರೂಪಾಯಿಗಳ ಸಾಲ ಬೇಕೆಂದು ಮನವಿ ಮಾಡಿದ್ದರು. ಮಾರನೇ ದಿನವೇ ಅಂದರೆ 2009ರ ಅ.7ರಂದು ಸಾಲ ಮಂಜೂರಾಗಿತ್ತು.
ಅದೇ ವರ್ಷದ ನ.4ರಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಮತ್ತೂಂದು ಅಲ್ಪಕಾಲದ ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿತ್ತು. ಅದೇ ದಿನವೇ ಸಾಲವನ್ನು ಬ್ಯಾಂಕ್ ವತಿಯಿಂದ ಮಂಜೂರು ಮಾಡಲಾಗಿತ್ತು. ಗಮನಾರ್ಹ ಅಂಶವೆಂದರೆ ಬ್ಯಾಂಕ್‌ನಲ್ಲಿ ಸಾಲ ಮಂಜೂರು ಮಾಡಲು ಸಮಿತಿಯೊಂದು ಸಭೆ ಸೇರಿ ಅನುಮೋದನೆ ನೀಡಬೇಕಾಗಿತ್ತು. ಆದರೆ ಮಲ್ಯರಿಗಾಗಿ ನಿಯಮಗಳ ಉಲ್ಲಂಘನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಸರ್ಕಾರವೇ ಕಾರಣ: ಈ ನಡುವೆ ಶುಕ್ರವಾರ ಮಾಧ್ಯಮಗಳ ವಿರುದ್ಧ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿದ್ದ ವಿಜಯ ಮಲ್ಯ ಶನಿವಾರ ಸರ್ಕಾರದ ನಿಯಮಗಳು, ಮಾರುಕಟ್ಟೆ ಏರಿಳಿತಗಳು ತಮ್ಮ ವಿಮಾನಯಾನ ಸಂಸ್ಥೆ ವಿಫಲವಾಗಲು ಕಾರಣ. ಕೇಂದ್ರ ಸರ್ಕಾರ ಏರ್ ಇಂಡಿಯಾ ನೆರವಿಗೆ ಬಂದು, ತಮ್ಮ ಸಂಸ್ಥೆಗೆ ನೆರವು ನೀಡಲೇ ಇಲ್ಲ ಎಂದು ಸರಣಿ ಟ್ವೀಟ್‌ನಲ್ಲಿ ದೂರಿದ್ದಾರೆ. ಇದರ ಜತೆಗೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ತಮ್ಮ ಅದ್ಧೂರಿ ಜೀವನ ಶೈಲಿ ವಿಮಾನ ಯಾನ ಸಂಸ್ಥೆ ಪತನಕ್ಕೆ ಕಾರಣವಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ನಡುವೆ ಯುಪಿಎ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.