Advertisement
ಕೋರ್ಟ್ ತೀರ್ಪು2016ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ಗೆ ಮಲ್ಯ ಪರಾರಿಯಾದ ಬಳಿಕ ಮೋದಿ ನೇತೃತ್ವದ ಸರಕಾರದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿದ್ದ ನಿರಂತರ ಟೀಕಾ ಪ್ರಹಾರಕ್ಕೆ ಸೋಮವಾರ ಪೂರ್ಣ ವಿರಾಮ ಸಿಕ್ಕಿದಂತಾಗಿದೆ. ಸಿಬಿಐ, ಇತರ ತನಿಖಾ ಸಂಸ್ಥೆಗಳು, ಖುದ್ದು ಪ್ರಧಾನಿ ನರೇಂದ್ರ ಮೋದಿ ಹಲವು ಹಂತದಲ್ಲಿ ಬ್ರಿಟನ್ ಸರಕಾರದ ಜತೆ ಮಾತುಕತೆ ನಡೆಸಿದ್ದು ಪರಿಣಾಮ ಬೀರಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಈ ದಿನ ದೇಶಕ್ಕೆ ಅತ್ಯಂತ ದೊಡ್ಡದು. ಯುಪಿಎ ಅವಧಿಯಲ್ಲಿ ಲಾಭ ಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಹಿಡಿದು ದೇಶಕ್ಕೆ ಕರೆ ತರುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಮೋಸ ಮಾಡಿದವರು ಯಾರೂ ಕೈತಪ್ಪಿ ಹೋಗಿಲ್ಲ ಎಂದು ನುಡಿದಿದ್ದಾರೆ. ಬಿಜೆಪಿ ಯಾಕೆ ಮಲ್ಯರ ಗಡೀಪಾರಿಗೆ ಶ್ರಮಿಸಲಿಲ್ಲ ಎಂಬ ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಎಂದು ಹೇಳಿದ ಜೇಟ್ಲಿ, ಕಾಂಗ್ರೆಸ್ ನಾಯಕರೇ ಮಲ್ಯರಂಥವರಿಗೆ ಸಾಲ ನೀಡಿ ಬೆಳೆಯಲು ಕಾರಣರಾದರು. ಆದರೆ ದೇಶ ಬಿಟ್ಟು ಪರಾರಿಯಾದ ಅವರನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈ ತೀರ್ಪು ಕೇಂದ್ರ ಸರಕಾರದ ವಿರುದ್ಧ ನಿರಂತರವಾಗಿ ಅಪಪ್ರ ಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಆತ್ಮಾವಲೋಕನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ್ದಾರೆ.
Related Articles
2016ರಲ್ಲಿ ಮಲ್ಯ ಭಾರತ ಬಿಟ್ಟು ಪರಾರಿಯಾಗುವುದಕ್ಕೆ ಮೊದಲು ವಿತ್ತ ಸಚಿವ ಜೇಟ್ಲಿಯವರನ್ನು ಭೇಟಿಯಾಗಿದ್ದರು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಸಾಲ ಮರು ಪಾವತಿ ಯೋಜನೆ ಚರ್ಚಿಸಿದ್ದರು ಎಂಬ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿತ್ತು.
Advertisement
ಸಿದ್ಧಗೊಂಡಿದೆ ಆರ್ಥರ್ ರಸ್ತೆ ಜೈಲುತೀರ್ಪು ಪ್ರಕಟವಾಗುತ್ತಲೇ ಮುಂಬಯಿಯ ಆರ್ಥರ್ ರಸ್ತೆಯಲ್ಲಿರುವ ಕಾರಾಗೃಹ ಅತೀ ಗಣ್ಯ ಕೈದಿಯ ಸ್ವಾಗತಕ್ಕೆ ಸಿದ್ಧಗೊಂಡಿದೆ. ಗರಿಷ್ಠ ಪ್ರಮಾಣದ ಭದ್ರತೆ ಇರುವ ಈ ಜೈಲಲ್ಲಿ ಎಲ್ಲ ರೀತಿಯ ವ್ಯವಸ್ಥೆ ಪೂರೈಸಲಾಗಿದೆ. ಅಜ್ಮಲ್ ಕಸಬ್ ಇದ್ದ ಬ್ಯಾರಕ್ ಸಮೀಪವೇ ಮಲ್ಯರನ್ನು ಇರಿಸಲಾಗುತ್ತದೆ. ಈ ಜೈಲಿನ ಫೋಟೋ, ವೀಡಿಯೋಗಳನ್ನು ವೆಸ್ಟ್‌ಮಿನಿಸ್ಟರ್ ಕೋರ್ಟ್‌ಗೂ ಸಲ್ಲಿಸಲಾಗಿತ್ತು. ಇಲ್ಲಿನ ಎಲ್ಲ ಬ್ಯಾರಕ್‌ಗಳಿಗೆ ಸಿಸಿಟಿವಿ ವ್ಯವಸ್ಥೆ ಇದ್ದು ಎಲ್ಲ ಹಂತದಲ್ಲಿಯೂ ಕೈದಿಗಳ ಮೇಲೆ ನಿಗಾ ಇರಿಸಲಾಗುತ್ತದೆ. ಮಲ್ಯಗೆ ತುರ್ತು ಚಿಕಿತ್ಸೆ ನೀಡಲು ಬೇಕಾಗಿರುವ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯೂ ಇದೆ. ದುರದೃಷ್ಟಕರ
ಕೋರ್ಟ್‌ನ ಹೊರಭಾಗದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಉದ್ಯಮಿ ಮಲ್ಯ ತೀರ್ಪು ದುರದೃಷ್ಟಕರ ಎಂದು ಹೇಳಿದ್ದಾರೆ. ಆದರೆ ತಮ್ಮ ವಕೀಲರ ತಂಡ ತೀರ್ಪು ಪರಿಶೀಲಿಸಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಈ ಮೂಲಕ ಇನ್ನೂ ದೀರ್ಘ ಕಾನೂನು ಪ್ರಕ್ರಿಯೆ ಇದೆ ಎಂದು ಹೇಳಿದ್ದಾರೆ. ಸಾಲ ಪಾವತಿ ಬಗ್ಗೆ ಹೇಳಲಿಕ್ಕಿರುವುದನ್ನು ಕೋರ್ಟ್‌ನಲ್ಲಿಯೇ ಹೇಳಿದ್ದೇನೆ ಎಂದು ಮಲ್ಯ ಅಲವತ್ತುಕೊಂಡರು. “ಭಾರತಕ್ಕೆ ಮೋಸ ಮಾಡಿದವರು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಜೇಟ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲ್ಯ ನನ್ನನ್ನು ಉದ್ದೇಶಿಸಿ ಹೇಳಿದ ಮಾತು ಅದಾಗಿರಲಿಕ್ಕಿಲ್ಲ. ಹೀಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ. 7000 ಕೋ.ರೂ.ಸಾಲದ ಮೊತ್ತ
17ಬ್ಯಾಂಕ್‌ಗಳಿಂದ ಸಾಲ
9000 ಕೋ.ರೂ.ಬಡ್ಡಿ ಸೇರಿದ ಬಳಿಕದ ಮೊತ್ತ
62 ಪುಟಗಳ ತೀರ್ಪು ಮುಂದಿನ ಪ್ರಕ್ರಿಯೆ ಏನು?
ಇನ್ನು 14 ದಿನಗಳ ಅವಧಿಯಲ್ಲಿ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ
ಯು.ಕೆ.ಯ ಗೃಹ ಕಾರ್ಯದರ್ಶಿ 2 ತಿಂಗಳ ಒಳಗಾಗಿ ಗಡೀಪಾರು ಆದೇಶಕ್ಕೆ ಸಹಿ ಮಾಡಬೇಕು. ಮಲ್ಯರನ್ನು ಶೀಘ್ರವೇ ಭಾರತಕ್ಕೆ ಕರೆತರುವ ವಿಶ್ವಾಸ ನಮ್ಮದು. ಈ ಪ್ರಕರಣದಲ್ಲಿ ಕಠಿನವಾಗಿ ದುಡಿದಿದ್ದೇವೆ. ಪ್ರಬಲ ಕಾನೂನಿನ ಅಂಶಗಳನ್ನು ನಾವು ಪ್ರಬಲವಾಗಿಯೇ ಮಂಡಿಸಿದ್ದೆವು. ಈ ಪ್ರಕ್ರಿಯೆಯಲ್ಲಿ ಜಯ ಸಿಗುವ ನಿರೀಕ್ಷೆಯಲ್ಲಿದ್ದೆವು.
– ಸಿಬಿಐ ವಕ್ತಾರ ಈ ವಿಷಯ ಬ್ಯಾಂಕಿಂಗ್ ವಲಯಕ್ಕೆ ಸೇರಿದ್ದರಿಂದಾಗಿ ಇದು ಮೋದಿ ಸರಕಾರಕ್ಕೆ ಸಿಕ್ಕ ಗೆಲುವಲ್ಲ. ಇದಕ್ಕೆ ಬದಲಾಗಿ ಸರಕಾರ ರಫೇಲ್ ಡೀಲ್ ಬಗ್ಗೆ ಗಮನಹರಿಸಲಿ.
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಯ ಇಲ್ಲಿಗೆ ಬಂದರೆ ಅವರನ್ನು ಭದ್ರತೆಯಿಂದ ನೋಡಿಕೊಳ್ಳಲಾಗುತ್ತದೆ. ಅದಕ್ಕೆ ಯಾವುದೇ ಆತಂಕ ಬೇಡ.
- ಅರ್ಥರ್ ರಸ್ತೆ ಜೈಲು ಅಧಿಕಾರಿ ಈ ನಿಟ್ಟಿನಲ್ಲಿ ಪ್ರಧಾನಿಯವರನ್ನು ಅಭಿನಂದಿಸಬೇಕು. ಹಿಂದಿನ ಸಂದರ್ಭಗಳಲ್ಲಿ ತನಿಖಾ ಸಂಸ್ಥೆಗಳು ಅವರ ಕರ್ತವ್ಯ ನಿರ್ವಹಿಸದಂತೆ ಈ ಬಾರಿ ತಡೆಯಲಾಗಿಲ್ಲ. ಜನವರಿ ಅಂತ್ಯಕ್ಕೆ ಮಲ್ಯ ದೇಶಕ್ಕೆ ಆಗಮಿಸಬಹುದು.
-ಡಾ| ಸುಬ್ರಹ್ಮಣ್ಯನ್ ಸ್ವಾಮಿ ಬಿಜೆಪಿ ರಾಜ್ಯಸಭಾ ಸದಸ್ಯ