Advertisement

ಮಲ್ಯ ವಿರುದ್ಧದ ಸಾಕ್ಷ್ಯ ಅಂಗೀಕರಿಸಿದ ಕೋರ್ಟ್‌

06:00 AM Apr 28, 2018 | |

ಲಂಡನ್‌: ಉದ್ಯಮಿ ವಿಜಯ ಮಲ್ಯ ವಿರುದ್ಧ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾಕ್ಷ್ಯಗಳು ಅಂಗೀಕಾರಗೊಂಡಿವೆ. ಇದರಿಂದಾಗಿ ಭಾರತದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿ ರುವ ಮಲ್ಯರ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐಗೆ ಮಹತ್ವದ ಯಶಸ್ಸು ಲಭಿಸಿದೆ. ಗಡಿಪಾರಿಗೆ ಸಂಬಂಧಿಸಿದ ಮುಂದಿನ ವಿಚಾರಣೆ ಜು.11ರಂದು ನಡೆಯಲಿದೆ.

Advertisement

ಕೋರ್ಟಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸಿಬಿಐ, “ಮಲ್ಯರಿರಾಗಿ ಭಾರತದಲ್ಲಿ ಐರೋಪ್ಯ ಶೈಲಿಯ ಕಾರಾಗೃಹವೂ ಸಿದ್ಧಗೊಂಡಿದೆ’ ಎಂದೂ ಅರಿಕೆ ಮಾಡಿದೆ. ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರಿಂದ ಕಳೆದ ಏಪ್ರಿಲ್‌ನಲ್ಲಿ ಮಲ್ಯ ಬಂಧನಕ್ಕೆ ಒಳಗಾಗಿ ಕ್ಷಣದಲ್ಲಿ ಜಾಮೀನು ಪಡೆದುಕೊಂಡಿದ್ದರು.

ಕರ್ನಾಟಕದಲ್ಲಿ ಮತದಾನ ಮಾಡಲು ಅಸಾಧ್ಯ
ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಕೋರ್ಟ್‌ ಹೊರಗೆ ಮಾತನಾಡಿ ರುವ ಉದ್ಯಮಿ ವಿಜಯ ಮಲ್ಯ, ತನಗೆ ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಆಸೆ ಇದೆ. ಹಕ್ಕು ಚಲಾಯಿಸುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು. ಆದರೆ ತಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವ ಕಾರಣ ಸ್ವದೇಶಕ್ಕೆ ತೆರಳಲಾಗುತ್ತಿಲ್ಲ ಎಂದು ಹೇಳಿ ಕೊಂಡಿದ್ದಾರೆ. ಮಲ್ಯ 2002ರ ಏ.10 ರಿಂದ 2008ರ ಏ.9ರ ವರೆಗೆ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next