Advertisement
ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ತಡೆ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಮಲ್ಯ ಆಗ್ರಹಿಸಿದ್ದರಾದರೂ ಕೋರ್ಟ್ ಅದನ್ನು ತಳ್ಳಿಹಾಕಿತ್ತು. ಸಾಲ ಪಾವತಿಸದೆ ಲಂಡನ್‌ಗೆ ಪರಾರಿಯಾಗಿರುವ ಮಲ್ಯ ಗಡೀಪಾರು ವಿಚಾರಣೆಯಲ್ಲೂ ಸೋಲುಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಭಾಗದ ವಿಚಾರಣೆ ಫೆ. 5ರಿಂದ ನಡೆಯಲಿದೆ. ಇದರಲ್ಲಿ ಸ್ವತ್ತುಗಳ ಜಪ್ತಿ ಬಗ್ಗೆ ಕೋರ್ಟ್ ವಿಚಾರಣೆ ನಡೆಸಲಿದೆ. 12,500 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ತತ್‌ಕ್ಷಣ ವಶಕ್ಕೆ ಪಡೆಯಲು ಅನುಮತಿ ನೀಡಬೇಕೆಂದು ಇಡಿ ಆಗ್ರಹಿಸಿತ್ತಾದರೂ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವುದಾಗಿ ಕೋರ್ಟ್ ತೀರ್ಪಿತ್ತಿದೆ. ಸರಕಾರಕ್ಕೆ ಸಂದ ಜಯ
ಮಲ್ಯ ವಿರುದ್ಧ ವಿಶೇಷ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ಇದು ಭ್ರಷ್ಟಾಚಾರದ ವಿರುದ್ಧ ಸರಕಾರದ ಕ್ರಮಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ ಎಂದಿದೆ. ಕಾಂಗ್ರೆಸ್ ಸರಕಾರದ ಪೋಷಣೆಯಲ್ಲಿ ಮಲ್ಯ ಬೆಳೆದಿದ್ದರು ಎಂದು ಬಿಜೆಪಿ ವಕ್ತಾರ ಪಾತ್ರ ಹೇಳಿದ್ದಾರೆ.