ಲಂಡನ್: ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಾಲ ನೀಡಿದ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಲಂಡನ್ ಹೈಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಜತೆಗೆ ಒಕ್ಕೂಟ ಸಲ್ಲಿಸಿದ್ದ ಅರ್ಜಿಯಲ್ಲಿ ಮಲ್ಯ ಅವರು ಭಾರತದಲ್ಲಿ ಹೊಂದಿರುವ ಆಸ್ತಿಗಳ ಮೇಲಿನ
ಸೆಕ್ಯುರಿಟಿಯನ್ನೂ ವಾಪಸ್ ಪಡೆಯಲು ಹೈಕೋರ್ಟ್ ಸಮ್ಮತಿಸಿದೆ. ಜು.26ರಂದು ಅಂತಿಮ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಕೈ-ಕಮಲ ಟೂಲ್‌ಕಿಟ್ ಸಮರ : ಮತ್ತೊಮ್ಮೆ ಚರ್ಚೆಯ ವಸ್ತುವಾದ ಟೂಲ್ ಕಿಟ್
ಮಲ್ಯ ಸಲ್ಲಿಸಿದ್ದ ಆಸ್ತಿಗಳ ಮೇಲಿನ ಸೆಕ್ಯುರಿಟಿ ಅಂಶ ರದ್ದು ಮಾಡುವ ಬಗ್ಗೆ ಬ್ಯಾಂಕ್‌ಗಳ ಒಕ್ಕೂಟ ವಾದಿಸಿತ್ತು. ಅದನ್ನು ಪುಷ್ಟೀಕರಿಸಿದ ಜಡ್ಜ್ ಮೈಕೆಲ್ ಬ್ರಿಗ್ಸ್ ಆಸ್ತಿಗಳಿಗೆ ನೀಡಲಾಗಿರುವ ಸೆಕ್ಯುರಿಟಿ ರದ್ದು ಮಾಡುವ ಬಗ್ಗೆ ಯಾವ ತಡೆಯೂ ಇಲ್ಲ ಎಂದರು.
ದಿವಾಳಿ ಕಾಯ್ದೆಯ ಅನ್ವಯ ಆಸ್ತಿಗಳ ವಿಲೇವಾರಿ ಬಗ್ಗೆ ಅವಕಾಶ ಬ್ಯಾಂಕ್‌ಗಳಿಗೆ ಇದೆ ಎಂದರು