Advertisement

ಉದಯವಾಣಿ ಫೇಸ್ಬುಕ್ ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಸ್ವರಾಜ್ ಶೆಟ್ಟಿ

12:29 PM Apr 21, 2021 | Team Udayavani |

ಮಣಿಪಾಲ: ತುಳು ರಂಗಭೂಮಿ ಮತ್ತು ಚಲನಚಿತ್ರ ರಂಗದ ಹೆಸರಾಂತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ‘ಶಿವಧೂತೆ ಗುಳಿಗೆ’ ಖ್ಯಾತಿಯ ಸ್ವರಾಜ್ ಶೆಟ್ಟಿ ಅವರು ‘ಉದಯವಾಣಿ ಡಾಟ್ ಕಾಮ್’ ನ ‘ತೆರೆದಿದೆ ಮನೆ ಬಾ ಅತಿಥಿ’ ಎಂಬ ಫೇಸ್ ಬುಕ್  ಕಾರ್ಯಕ್ರಮದಲ್ಲಿ ಬುಧವಾರ (ಏಪ್ರಿಲ್ 21) ಸಂಜೆ 5.30ಕ್ಕೆ ಪಾಲ್ಗೊಳ್ಳಲಿದ್ದಾರೆ.

Advertisement

ತುಳುನಾಡಿನ ಚಾರಿತ್ರಿಕ ಗುಳಿಗ ದೈವದ ಕಥೆಯನ್ನು ಸಾರುವ ‘ಶಿವಧೂತೆ ಗುಳಿಗೆ’ ನಾಟಕ ಕರಾವಳಿ ಭಾಗದಲ್ಲಿ ಸೂಪರ್ ಹಿಟ್ ಆಗಿದೆ. ಇದರ ನಿರ್ದೇಶನ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರದ್ದು. ಗುಳಿಗ ಪಾತ್ರದಲ್ಲಿ ಮಿಂಚಿರುವ ಸ್ವರಾಜ್ ಶೆಟ್ಟಿ ಅವರು ಫೇಸ್ ಬುಕ್ ಲೈವ್ ನಲ್ಲಿ ಭಾಗವಹಿಸಲಿದ್ದು, ರಂಗಭೂಮಿ ಅನುಭವದ ಬಗ್ಗೆ ಮಾತನಾಡಲಿದ್ದಾರೆ.

ತುಳು ರಂಗಭೂಮಿಯಲ್ಲಿ ಹೊಸತನಕ್ಕೆ ಹೆಸರಾದವರು ವಿಜಯ್ ಕುಮಾರ್ ಕೊಡಿಯಾಲ್ ಬೈಲ್.  ಕಳೆದ ಕೆಲವು ದಶಕಗಳಿಂದ ರಂಗಭೂಮಿ ಮತ್ತು ಸಿನಿಮಾ ಪ್ರಿಯರ ಮನಸ್ಸಿನಲ್ಲಿ ಮನೆ ಮಾಡಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, ‘ವಿದ್ದು’, ‘ಕುಟುಂಬ’, ‘ಮದಿಮೆ’, ‘ಒರಿಯೆ ಮಗೆ’, ‘ಕೋಡೆ-ಇನಿ-ಎಲ್ಲೆ’ ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?

ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರವರ ‘ಒರಿಯಾರ್ದ್ ಒರಿ ಅಸಲ್’ ಚಿತ್ರ ತುಳು ಚಿತ್ರರಂಗದಲ್ಲಿ ಮೈಲಿಗಲ್ಲು ನಿರ್ಮಸಿತ್ತು. ಹೊಸ ಬಗೆಯ ಚಿತ್ರಗಳ ಹರಿವಿಗೆ ಪ್ರಮುಖ ಕಾರಣವಾಗಿತ್ತು ‘ಒರಿಯಾರ್ದ್ ಒರಿ ಅಸಲ್’.

Advertisement

ಈ ಹಿಂದೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಗರಡಿಯಲ್ಲಿ ಪಳಗಿದ್ದ ಸ್ವರಾಜ್ ಶೆಟ್ಟಿ ಇಂಜಿನಿಯರಿಂಗ್ ಪದವೀಧರ. ‘ಬರ್ಕ’ ತುಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಅವರು ನಂತರ ಚೆನ್ನೈನಲ್ಲಿ ಉದ್ಯೋಗದಲ್ಲಿದ್ದರು. ‘ಶಿವಧೂತೆ ಗುಳಿಗೆ’ ನಾಟಕದ ‘ಗುಳಿಗ’ ಪಾತ್ರಕ್ಕಾಗಿ ಉದ್ಯೋಗವನ್ನೂ ತೊರೆದು ಇದೀಗ ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗುಳಿಗ ಪಾತ್ರಕ್ಕಾಗಿ ನಡೆಸಿದ ತಯಾರಿ, ಅನುಭವ, ಜನರಿಂದ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಇಂದು ಸಂಜೆ 5.30ಕ್ಕೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಸ್ವರಾಜ್ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next