Advertisement

ವಿಜಯ್‌ ಹಜಾರೆ: ಕರ್ನಾಟಕಕ್ಕೆ ಯುಪಿ ಎದುರಾಳಿ

11:19 PM Feb 19, 2021 | Team Udayavani |

ಬೆಂಗಳೂರು: ದೇಶಿ ಮಟ್ಟದ ಅತ್ಯುನ್ನತ ಏಕದಿನ ಕ್ರಿಕೆಟ್‌ ಟೂರ್ನಿಯಾದ “ವಿಜಯ್‌ ಹಜಾರೆ ಟ್ರೋಫಿ’-2021ರ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಎಲೈಟ್‌ ಗ್ರೂಪ್‌ “ಸಿ’ಯಲ್ಲಿ ಸ್ಥಾನ ಪಡೆದಿರುವ ಹಾಲಿ ಚಾಂಪಿಯನ್‌ ಕರ್ನಾಟಕ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೆಣಸಲಿದೆ. ಶನಿವಾರ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿದೆ.

Advertisement

ಟೂರ್ನಿಯಲ್ಲಿ 50 ಓವರ್‌ಗಳ 103 ಪಂದ್ಯಗಳು ನಡೆಯಲಿದ್ದು, ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸೂರತ್‌, ಇಂದೋರ್‌, ಬೆಂಗಳೂರು, ಜೈಪುರ, ಕೋಲ್ಕತಾ ಮತ್ತು ಚೆನ್ನೈ ಈ ಪಂದ್ಯದ ತಾಣಗಳು. ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಿಸಿಸಿಐಗೆ, ಈ ಟೂರ್ನಿಯೂ ಯಶಸ್ಸು ಕಾಣುವ ವಿಶ್ವಾಸವಿದೆ.

ಸ್ಟಾರ್‌ ಆಟಗಾರರು ಕಣಕ್ಕೆ :

ಭಾರತ ತಂಡದ ಸ್ಟಾರ್‌ ಆಟ ಗಾರರಾದ ಹನುಮ ವಿಹಾರಿ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಶಾರ್ದೂಲ್‌ ಠಾಕೂರ್‌ ಮೊದಲಾದ ಆಟಗಾರರು ಇಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಮುಂಬರುವ ಏಕದಿನ ಸರಣಿ ಹಿನ್ನೆಲೆಯಲ್ಲಿ ಇವರಿಗೆಲ್ಲ ಇದು ಮಹತ್ವದ ಪಂದ್ಯಾವಳಿ. ಜತೆಗೆ ಈ ಬಾರಿಯ ಐಪಿಎಲ್‌ಗೆ ಬೃಹತ್‌ ಮೊತ್ತಕ್ಕೆ ಹರಾಜಾದ ಕನ್ನಡಿಗ ಕೆ. ಗೌತಮ್‌, ಶಾರೂಖ್‌ ಖಾನ್‌ ಅವರೆಲ್ಲ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.

ಕರ್ನಾಟಕದ ಪಂದ್ಯಗಳು :

Advertisement

ಫೆ. 20 : ಕರ್ನಾಟಕ-ಉ. ಪ್ರದೇಶ

ಫೆ. 22 :  ಕರ್ನಾಟಕ-ಬಿಹಾರ

ಫೆ. 24 : ಕರ್ನಾಟಕ-ಒಡಿಶಾ

ಫೆ. 26 : ಕರ್ನಾಟಕ-ರೈಲ್ವೇಸ್‌

Advertisement

Udayavani is now on Telegram. Click here to join our channel and stay updated with the latest news.

Next