Advertisement
ಅಗರ್ವಾಲ್ ಪಡೆ “ಸಿ’ ಗುಂಪಿನಲ್ಲಿ 7 ಪಂದ್ಯಗಳಲ್ಲಿ ಆರನ್ನು ಗೆದ್ದು ಅಗ್ರಸ್ಥಾನಿಯಾಯಿತು. ಇತರ ಗುಂಪುಗಳ ಅಗ್ರಸ್ಥಾನಿ ತಂಡಗಳಾದ ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಬರೋಡಾ ಕೂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿವೆ.
Related Articles
ಚೇಸಿಂಗ್ ವೇಳೆ ಕರ್ನಾಟಕ ತಂಡದ ಕಪ್ತಾನ ಮಾಯಾಂಕ್ ಅಗರ್ವಾಲ್ ಮತ್ತೊಂದು ಶತಕದೊಂದಿಗೆ ಮಿಂಚಿದರು. 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸೇರಿದಂತೆ ಅಜೇಯ 116 ರನ್ ಬಾರಿಸಿದರು. ಇದು ಈ ಆವೃತ್ತಿಯಲ್ಲಿ ಮಾಯಾಂಕ್ ಸಿಡಿಸಿದ 4ನೇ ಶತಕ. ಮಾಯಾಂಕ್ಗೆ ಸಾಥ್ ನೀಡಿದ ಕೆ.ವಿ. ಅನೀಶ್ ಅವರಿಂದ ಅಜೇಯ 82 ರನ್ ಬಂತು.
Advertisement
ಪಂಜಾಬನ್ನು ಹಿಂದಿಕ್ಕಿದ ಕರ್ನಾಟಕ“ಸಿ’ ಗುಂಪಿನ ಕ್ವಾರ್ಟರ್ ಫೈನಲ್ ನೇರ ಪ್ರವೇಶದ ಓಟದಲ್ಲಿ ಪಂಜಾಬ್ ತಂಡವನ್ನು ಕರ್ನಾಟಕ ಹಿಂದಿಕ್ಕಿದ್ದೇ ಒಂದು ವಿಶೇಷ. ಕರ್ನಾಟಕ 24 ಅಂಕ ಮತ್ತು 1.393 ನೆಟ್ ರನ್ರೇಟ್ ಹೊಂದಿತ್ತು. ಪಂಜಾಬ್ ಕೂಡ 24 ಅಂಕ ಗಳಿಸಿತ್ತು; ಆದರೆ ನೆಟ್ ರನ್ರೇಟ್ನಲ್ಲಿ ಮುಂದಿತ್ತು (2.401). ರನ್ರೇಟ್ ಲೆಕ್ಕಾಚಾರದಲ್ಲಿ ಪಂಜಾಬ್ ಮುನ್ನಡೆಯಬೇಕಿತ್ತು. ಆದರೆ ಇತ್ತಂಡಗಳ ಲೀಗ್ ಮುಖಾಮುಖಿಯಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಕಾರಣ “ಸಿ’ ಗುಂಪಿನ ಅಗ್ರಸ್ಥಾನದ ಗೌರವ ಸಂಪಾದಿಸಿತು. ಪ್ರತೀ ಗುಂಪಿನ ಅಗ್ರಸ್ಥಾನಿ ತಂಡಗಳು ಮತ್ತು ಅತ್ಯು ತ್ತಮ ಪ್ರದರ್ಶನ ನೀಡಿದ ಒಂದು ದ್ವಿತೀಯ ಸ್ಥಾನಿ ತಂಡ ಕ್ವಾರ್ಟರ್ ಫೈನಲ್ ತಲುಪಲಿದೆ. ಹೀಗಾಗಿ ಪಂಜಾಬ್ ಕೂಡ ಕ್ವಾರ್ಟರ್ಗೆàರುವುದು ಬಹುತೇಕ ಖಚಿತ.