Advertisement

Vijay Hazare: ಕರ್ನಾಟಕಕ್ಕೆ ಹೈದರಾಬಾದ್‌ ಎದುರಾಳಿ

10:01 PM Dec 30, 2024 | Team Udayavani |

ಅಹ್ಮದಾಬಾದ್‌: ವಿಜಯ್‌ ಹಜಾರೆ ಟ್ರೋಫಿ ಲಿಸ್ಟ್‌ “ಎ’ ಏಕದಿನ ಪಂದ್ಯಾವಳಿಯಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿರುವ ಕರ್ನಾಟಕ ತಂಡ, ಮಂಗಳವಾರ ಹೈದರಾಬಾದ್‌ ವಿರುದ್ಧ ಕಣಕ್ಕಿಳಿಯಲಿದೆ.

Advertisement

ಈ ಪಂದ್ಯ ಅಹ್ಮದಾಬಾದ್‌ನ ಎಡಿಎಸ್‌ಎ ರೈಲ್ವೇಸ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.”ಸಿ’ ಗುಂಪಿನಲ್ಲಿರುವ ಕರ್ನಾಟಕ ಹಿಂದಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತು. ಪ್ರಚಂಡ ಫಾರ್ಮ್ನಲ್ಲಿರುವ ನಾಯಕ ಮಾಯಾಂಕ್‌ ಅಗರ್ವಾಲ್‌ ಸತತ 2 ಶತಕ ಸಾಧನೆಯಿಂದ ಗಮನ ಸೆಳೆದಿದ್ದಾರೆ. ಅವರು ಪಂಜಾಬ್‌ ಮತ್ತು ಅರುಣಾಚಲ ಪ್ರದೇಶ ವಿರುದ್ಧ ಅಜೇಯ ಶತಕ ಹೊಡೆದಿದ್ದರು.

ಈ ಆವೃತ್ತಿಯಲ್ಲಿ ಮುಂಬಯಿ, ಪುದುಚೇರಿ, ಪಂಜಾಬ್‌, ಅರುಣಾಚಲ ಪ್ರದೇಶ ವಿರುದ್ಧ ಕರ್ನಾಟಕ ಜಯ ಸಾಧಿಸಿದೆ. 16 ಅಂಕಗಳೊಂದಿಗೆ “ಸಿ’ ಗುಂಪಿನ ಅಗ್ರಸ್ಥಾನದಲ್ಲಿದ್ದು, ಕ್ವಾರ್ಟರ್‌ ಫೈನಲ್‌ ಸಮೀಪಿಸಿದೆ. ತಲಾ 12 ಅಂಕ ಗಳಿಸಿರುವ ಪಂಜಾಬ್‌ ಮತ್ತು ಸೌರಾಷ್ಟ್ರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.

ಅತ್ತ ಹೈದರಾಬಾದ್‌ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲಿನೊಂದಿಗೆ 5ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್‌ ತಂಡ ಪುದುಚೇರಿ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next