Advertisement

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

04:05 PM Nov 30, 2023 | Team Udayavani |

ವಿಶಾಖಪಟ್ಟಣಂ: ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ಬಹು ನಿರೀಕ್ಷಿತ ʼಹಾಯ್‌ ನಾನ್ನʼ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ತಂದೆ – ಮಗಳ ಭಾವಯಾನದ ಕಥೆವುಳ್ಳ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

Advertisement

ನಾನಿ – ಮೃಣಾಲ್‌ ಸೇರಿದಂತೆ ಸಿನಿಮಾತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ʼಹಾಯ್‌ ನಾನ್ನʼ ಪ್ರೀ ರಿಲೀಸ್‌ ಇವೆಂಟ್‌ ವಿಶಾಖಪಟ್ಟಣಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಗ್‌ ಸ್ಕ್ರೀನ್‌ ನಲ್ಲಿ ಹಾಕಿರುವ ಫೋಟೋವೊಂದರ ಕುರಿತು ವಿಜಯ್‌ ದೇವರಕೊಂಡ – ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.

ʼಹಾಯ್‌ ನಾನ್ನʼ ದಲ್ಲಿ ರಶ್ಮಿಕಾ ಹಾಗೂ ದೇವರಕೊಂಡ ನಟಿಸಿಲ್ಲ. ಆದರೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆಯ ಎಲ್‌ ಇಡಿ ಪರದೆ ಮೇಲೆ ಇದ್ದಕ್ಕಿದ್ದಂತೆ ರಶ್ಮಿಕಾ – ದೇವರಕೊಂಡ ಅವರ ಮಾಲ್ಡೀವ್ಸ್ ಹಾಲಿಡೇಯ ಫೋಟೋವನ್ನು ಹಾಕಲಾಗಿದೆ. ಇದನ್ನು ನೋಡಿ ಕೆಳಗೆ ಕೂತಿದ್ದ ಮೃಣಾಲ್‌ ಠಾಕೂರ್‌ ಶಾಕ್‌ ಆಗಿದ್ದಾರೆ. ಸಿನಿಮಾಕ್ಕೆ ಸಂಬಂಧವೇ ಇಲ್ಲದವರ ಫೋಟೋ ಹಾಕಿರುವುದಕ್ಕೆ ಅವರು ಶಾಕ್‌ ಆಗಿದ್ದಾರೆ.

ಸದ್ಯ ಈ ಫೋಟೋ ಬಿಗ್‌ ಸ್ಕ್ರೀನ್‌ ಮೇಲೆ ಹಾಕಲು ʼಹಾಯ್‌ ನನ್ನಾʼ ತಂಡದವರು  ಅನುಮತಿ ಕೇಳಿದ್ದರೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಆದರೆ ಇದನ್ನು ನೋಡಿದ ಕಾರ್ಯಕ್ರಮದ ನಿರೂಪಕಿ ಸುಮಾ, ಫೋಟೋಗ್ರಾಫರ್‌ ಬಳಿ ನನಗೆ ಸಂಶಯವಿದೆ. ಆ ದಿನ ಬಾಲಿಗೆ ಹೋದವನು ನೀನೇ ಇರಬೇಕು. ಒಂದು ವೇಳೆ ಇದ್ದರೆ ನೀನು ಅಂತಹ ಫೋಟೋಗಳನ್ನು ಕ್ಲಿಕ್‌ ಮಾಡಬಹುದೇ? ನೀನು ಸೆಲೆಬ್ರಿಟಿ ಫೋಟೋಗ್ರಾಫರ್‌ ಆಗಿದ್ದರೂ ಖಾಸಗಿತನ ಎನ್ನುವಂಥದ್ದು ಇರುತ್ತದೆ. ನೀವು ಡಿಸ್‌ ಪ್ಲೇ ಅಲ್ಲಿ ಏನೇ ನೋಡಿದರೂ ಅದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

Advertisement

ಇತ್ತ ʼಹಾಯ್‌ ನಾನ್ನʼ ತಂಡದ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಇದೊಂದು ಕೀಳು ಮಟ್ಟದ ಪ್ರಚಾರ ತಂತ್ರʼ ಒಬ್ಬರು ಕಮೆಂಟ್‌ ಮಾಡಿದ್ದಾರೆ. “ನೀವು ಇದನ್ನು ಬೇಕಂತಲೇ ಪ್ರದರ್ಶನ ಮಾಡಿದ್ದೀರಾ? ಎಂದಿದ್ದಾರೆ. “ಒಂದು ವೇಳೆ ಇದು ಪ್ರಚಾರದ ಪ್ಲ್ಯಾನ್‌ ಅಗಿದ್ದರೆ, ಅತ್ಯಂತ ಕೀಳಾದ ಯೋಜನೆ” ಎಂದು ಮತ್ತೊಬ್ಬರು ಹೇಳಿದ್ದಾರೆ.

7 ಭಾಷೆಗಳಲ್ಲಿ ʼಹಾಯ್‌ ನಾನ್ನʼ ಡಿ.7 ರಂದು ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next