ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆತ್ಮೀಯತೆ ಬಗ್ಗೆ ಕಳೆದ ಕೆಲ ಸಮಯದಿಂದ ನಾನಾ ವದಂತಿಗಳು ಸಿನಿವಲಯದಲ್ಲಿ ಹಬ್ಬಿದೆ. ಇತ್ತೀಚೆಗೆ ಇಬ್ಬರು ಜೊತೆಯಾಗಿ ವಿಯೆಟ್ನಾಂ ಸುತ್ತಾಡಿದ್ದರು ಎನ್ನುವ ಫೋಟೋಗಳು ವೈರಲ್ ಆಗಿತ್ತು.
ʼಗೀತಾ ಗೋವಿಂದಂʼ, ʼಡಿಯರ್ ಕಾಮ್ರೆಡ್ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಬಳಿಕ ರಶ್ಮಿಕಾ – ದೇವರಕೊಂಡ ಸ್ನೇಹ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿ ಹಾಗೂ ಹಬ್ಬದ ಸಂದರ್ಭದಲ್ಲಿ ಇಬ್ಬರು ಜೊತೆಯಾಗಿ ಸುತ್ತಾಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ – ದೇವರಕೊಂಡ ಅವರು ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಫಬ್ರವರಿ ಎರಡನೇ ವಾರದಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿತ್ತು. ಆದರೆ ಇದೀಗ ಈ ಬಗ್ಗೆ ಮತ್ತೊಂದು ವಿಚಾರ ಗೊತ್ತಾಗಿದೆ.
ಇಬ್ಬರು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು, ಸದ್ಯಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಚನೆಯಲ್ಲಿಲ್ಲ ಎಂದು ಮೂಲವೊಂದು ತಿಳಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
“ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ. ಸಂತೋಷದಿಂದ ಮತ್ತು ಅವರ ಸಂಬಂಧವು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ತೃಪ್ತರಾಗಿದ್ದಾರೆ ಮತ್ತು ಸದ್ಯಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಅಲ್ಲದೆ, ಅವರು ಈ ಸಮಯದಲ್ಲಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿದ್ದಾರೆ. ಆದ್ದರಿಂದ ಅವರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಯೋಜಿಸುತ್ತಿಲ್ಲ.” ಎಂದು ಮೂಲ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗೆ ರಶ್ಮಿಕಾ ಅವರ ʼಅನಿಮಲ್ʼ ಸಿನಿಮಾ ಹಿಟ್ ಆಗಿದೆ. ಇನ್ನು ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.