ಹೈದರಾಬಾದ್: ʼಪುಷ್ಪ-2ʼ (Pushpa 2: The Rul) ಹಿಟ್ ಮೂಲಕ ಖುಷ್ ಆಗಿರುವ ನಿರ್ದೇಶಕ ಸುಕುಮಾರ್ ರಾಮ್ ಚರಣ್ ಅವರು ʼಗೇಮ್ ಚೇಂಜರ್ʼ (Game Changer) ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ಯಾನ್ ಇಂಡಿಯಾ ʼಗೇಮ್ ಚೇಂಜರ್ʼ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಳಂಬದ ಬಳಿಕ ಚಿತ್ರ ರಿಲೀಸ್‌ಗೆ ಸಿದ್ದವಾಗಿದೆ. ರಿಲೀಸ್ ಡೇಟ್ ಸಮೀಸುತ್ತಿದ್ದಂತೆ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ.
ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕುಮಾರ್ (Filmmaker Sukumar) ‘ಗೇಮ್ ಚೇಂಜರ್ʼ ಸಿನಿಮಾದ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ.
“ಒಂದು ಗುಟ್ಟು ಹೇಳ್ತೇನೆ. ಚಿರಂಜೀವಿ ಸರ್ ಜತೆ ʼಗೇಮ್ ಚೇಂಜರ್ʼ ಸಿನಿಮಾ ನೋಡಿದೆ. ಫಸ್ಟ್ ರಿವ್ಯೂ ಕೊಡ್ತೀನಿ. ಫಸ್ಟ್ ಹಾಫ್ ಅದ್ಬುತ. ಇಂಟರ್ವಲ್, ಬ್ಲಾಕ್ ಬಸ್ಟರ್ ಆಗಿದೆ. ದ್ವಿತಿಯಾರ್ಧ ಫ್ಲ್ಯಾಷ್ ಬ್ಯಾಕ್ ಎಪಿಸೋಡ್ ರೋಮಾಂಚನವಾಗಿದೆ. ಶಂಕರ್ ಅವರ ಜಂಟಲ್‌ಮ್ಯಾನ್ ಮತ್ತು ಭಾರತೀಯುಡು (ಇಂಡಿಯಾನ್) ಸಿನಿಮಾದಂತೆ ನಾನು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದೆ” ಎಂದು ಹೇಳಿದ್ದಾರೆ.
“ರಂಗಸ್ಥಳಂ” ಚಿತ್ರಕ್ಕಾಗಿ ರಾಮ್ ಚರಣ್ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಾರೆ ಅಂಥ ನನ್ನ ಜತೆ ಇತರರಿಗೂ ನಂಬಿಕೆ ಇತ್ತು. ಈ ಚಿತ್ರ ನೋಡಿದ ಬಳಿಕ ನನಗೆ ಮತ್ತೆ ಅದೇ ರೀತಿಯ ನಂಬಿಕೆ ಬರುತ್ತಿದೆ. ಅವರಿಗೆ ಖಂಡಿತವಾಗಿಯೂ ಈ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ” ಎಂದು ಸುಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ʼಗೇಮ್ ಚೇಂಜರ್ʼ ʼಆರ್ ಆರ್ ಆರ್ʼ ನ ಅದ್ಭುತ ಯಶಸ್ಸಿನ ನಂತರ ರಾಮ್ ಚರಣ್ ಅವರ ಮೊದಲ ಚಿತ್ರವಾಗಿದೆ. ಶಂಕರ್ ನಿರ್ದೇಶನದ ಈ ಸಿನಿಮಾ ಜನವರಿ 10, 2025 ರಂದು ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ರಾಮ್ ಚರಣ್, ಎಸ್ ಜೆ ಸೂರ್ಯ, ಕಿಯಾರಾ ಅಡ್ವಾಣಿ, ಅಂಜಲಿ, ಸುಶಾಂತ್ ಸಮುದ್ರಕಣಿ, ನಾಸರ್ ಮುಂತಾದವರು ನಟಿಸಿದ್ದಾರೆ.