ತೆಲುಗು ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ‘ಲೈಗರ್’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮಾಸ್ ಫೈಟಿಂಗ್ ಮತ್ತು ರೊಮಾನ್ಸ್ ನ ಮಿಶ್ರಿತ ಪವರ್ ಫುಲ್ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ.
ಹೈದರಾಬಾದ್ ನ ಸುದರ್ಶನ್ ಥಿಯೇಟರ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ, ನಟಿ ಅನನ್ಯ ಪಾಂಡೆ, ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಪುರಿ ಜಗನ್ನಾಥ ಮತ್ತು ನಿರ್ಮಾಪಕ ಚಾರ್ಮಿ ಕೌರ್ ಪಾಲ್ಗೊಂಡಿದ್ದಾರೆ.
ಚಿತ್ರದಲ್ಲಿ ಬಾಕ್ಸರ್ ಮೈಕ್ ಟೈಸನ್ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯ ಕೃಷ್ಣ, ರೋನಿತ್ ರಾಯ್, ಅಲಿ ಮತ್ತು ಮಕರಂದ್ ದೇಶಪಾಂಡೆ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:‘ಮಲೆನಾಡು ಹೆದ್ದಾರಿ’ಗೆ ಬೇಕು ಕೆಎಸ್‌ಆರ್‌ಟಿಸಿ ಬಸ್ : ಕಾಸರಗೋಡು-ಕರ್ನಾಟಕ ಗಡಿ
Related Articles
‘ಲೈಗರ್’ ಚಿತ್ರದ ಕಥೆ ಮತ್ತು ನಿರ್ದೇಶನ ಪುರಿ ಜಗನ್ನಾಥ್ ಅವರದ್ದು. ಚಿತ್ರವನ್ನು ಪುರಿ ಜಗನ್ನಾಥ, ಕರಣ್ ಜೋಹರ್, ಚಾರ್ಮಿ ಕೌರ್ ನಿರ್ಮಿಸಿದ್ದಾರೆ.
Advertisement– Taran Adarsh (@taran_adarsh) 21 July 2022