ನವಿ ಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಮತ್ತು ಸುಕುಮಾರಿ ವಿ. ಹೆಗ್ಡೆ ಅವರ ವೈವಾಹಿಕ ಜೀವನದ ರಜತ ಮಹೋತ್ಸವದ ಅಂಗವಾಗಿ ಅಭಿನಂದನ ಕಾರ್ಯಕ್ರಮವು ಐರೋಲಿಯ ಹೆಗ್ಗಡೆ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ಸಮಾಜದ ಮಕ್ಕಳಿಂದ ಪ್ರಾರಂಭ ದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು. ಆನಂತರ ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಹಾಗೂ ಉಪನಗರಗಳ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು ಹಾಗೂ ಪರಿವಾರದವರು ವಿಜಯ ಬಿ. ಹೆಗ್ಡೆ ಮತ್ತು ಸುಕುಮಾರಿ ವಿ. ಹೆಗ್ಡೆ ದಂಪತಿಯನ್ನು ವೇದಿಕೆಗೆ ಕರೆತಂದು ಸ್ವಾಗತಿಸಿದರು.
ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ನೆರೂಲ್ ಶ್ರೀ ಶನಿಮಂದಿರದ ಗೌರವಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ದಕ್ಷಿಣ ಕನ್ನಡ ಹೆಗ್ಗಡೆ ಸಂಘದ ಮಾಜಿ ಅಧ್ಯಕ್ಷ ನಂದಕುಮಾರ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಎರ್ಲಪಾಡಿ, ಕೋಟೆಬೈಲು ಶ್ರೀ ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಅಜೆಕಾರು, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಹಿರಿಯರಾದ ವಿ. ಎಸ್. ಹೆಗ್ಡೆ, ನೆರೂಲ್ ಶ್ರೀ ಶನೀಶ್ವರ ಮಂದಿರದ ಜೊತೆ ಕೋಶಾಧಿಕಾರಿ ಆದ್ಯಪಾಡಿಗುತ್ತು ಕರುಣಾಕರ ಎಸ್. ಆಳ್ವ, ರಮೇಶ್ ಹೆಗ್ಡೆ, ಪ್ರಭಾಕರ ಹೆಗ್ಡೆ ಮೊದಲಾದವರು ಮಾತನಾಡಿ ವಿಜಯ ಬಿ. ಹೆಗ್ಡೆ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.
ಹೆಗ್ಗಡೆ ಸೇವಾ ಸಂಘದ ವತಿ ಯಿಂದ ಅವರಿಗೆ ಹೂವಿನ ಹಾರ ವನ್ನು ಹಾಕಿ ಶುಭಹಾರೈಸಿದರು. ಸಂಜೀವ ಪಿ. ಹೆಗ್ಡೆ, ವಿ. ಎಸ್. ಹೆಗ್ಡೆ ಮೊದಲಾದವರು ಅಭಿ ನಂದನ ಭಾಷಣಗೈದರು. ವಿವಿಧ ತುಳು-ಕನ್ನಡ, ಜಾತೀಯ ಸಂಘಟನೆಗಳಾದ ತುಳು ಕೂಟ ಐರೋಲಿ, ಶ್ರೀ ಶನೆಶ್ವರ ಮಂದಿರ ನೆರೂಲ್, ಮುಲುಂಡ್ ಫ್ರೆಂಡ್ಸ್, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ, ಶ್ರೀ ಅಯ್ಯಪ್ಪ ಚಾರಿಟೇಬಲ್ ಟ್ರಸ್ಟ್ ನೆರೂಲ್, ರಂಗಭೂಮಿ ಫೈನ್ ಆರ್ಟ್ಸ್ ನೆರೂಲ್, ಬಿಲ್ಲವರ ಅಸೋಸಿಯೇಶನ್ ನವಿ ಮುಂಬಯಿ ಸ್ಥಳೀಯ ಸಮಿತಿ, ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಸಮಿತಿ, ಘೋಡ್‌ಬಂದರ್ ಕನ್ನಡ ಸೇವಾ ಸಂಘ ಥಾಣೆ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕ ಮೊದಲಾದ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಹೆಗ್ಗಡೆ ಸೇವಾ ಸಂಘದ ಜತೆ ಕಾರ್ಯದರ್ಶಿ ರವಿ ಹೆರ್ಮುಂಡೆ ಅವರು ಕಾರ್ಯಕ್ರಮ ನಿರ್ವಹಿಸಿದರು.
ರವಿ ಹೆಗ್ಡೆ, ಮಾಜಿ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಾಗೂ ಸಂಘದ ಪದಾಧಿಕಾರಿಗಳು ಸಹಕರಿಸಿದರು. ವಿಜಯಾ ಬಿ. ಹೆಗ್ಡೆ ದಂಪತಿಯ ಮಕ್ಕಳಾದ ವಿಶ್ಮಾ ಮತ್ತು ಸಮೀಪ್ ಹಾಗೂ ಪರಿವಾರದ ಸದಸ್ಯ ಬಾಂಧವರಿಂದ ನೃತ್ಯವೈವಿಧ್ಯ ನಡೆಯಿತು. ಹೆಗ್ಗಡೆ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೊನೆಯಲ್ಲಿ ಭೋಜ ನದ ವ್ಯವಸ್ಥೆ ಆಯೋಜಿಸಲಾಗಿತ್ತು.
ಚಿತ್ರ-ವರದಿ: ಸುಭಾಷ್ ಶಿರಿಯಾ