Advertisement

ಲೆಗಸಿ ಫಸ್ಟ್ ಲುಕ್ ರಿಲೀಸ್ ಆಕ್ಷನ್ ಹೀರೋ ಆದ ವಿಹಾನ್ ಗೌಡ

10:18 AM Feb 26, 2020 | Nagendra Trasi |

ಬೆಂಗಳೂರು:ಕಾಲ್ ಕೆಜಿ ಪ್ರೀತಿ, ಪಂಚತಂತ್ರ ಚಿತ್ರಗಳಲ್ಲಿ ಚಾಕೋಲೇಟ್ ಹೀರೋ ಆಗಿ ಲವರ್ ಬಾಯ್ ಆಗಿ ಹುಡುಗಿಯ ಮನ ಕದ್ದಿದ್ದ ವಿಹಾನ್ ಗೌಡ ಈಗ ಆಕ್ಷನ್ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ.

Advertisement

ಅಷ್ಟೇ ಅಲ್ಲ ಪೆನ್ನು ಪೇಪರ್ ಹಿಡಿದು ಲೇಖಕನಾಗಲು ಹೊರಟಿದ್ದಾರೆ. ಪಂಚತಂತ್ರ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡ ವಿಹಾನ್ ಲೆಗಸಿ ಎಂಬ ಸಾಹಸ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸೆಟ್ಟೇರಿದ ಈ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಆಕ್ಷನ್ ಹೀರೋ ಆಗಿ ವಿಹಾನ್ ಕಾಣಿಸಿಕೊಂಡಿದ್ದಾರೆ.

ಗ್ರೇಟ್ ಬ್ರೋಸ್ ಪಿಕ್ಚರ್ ಬ್ಯಾನರ್ನಡಿ ನಿರ್ಮಾಣವಾಗ್ತಿರೋ ಲೆಗಸಿ ಚಿತ್ರಕ್ಕೆ ಮಂಜುನಾಥ್, ರಾಜೇಂದ್ರ ಬಂಡವಾಳ ಹೂಡಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ದುಡಿದಿದ್ದ ಎಂ. ಸುಭಾಷ್ ಚಂದ್ರ ಈ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಆಕ್ಷನ್, ಥ್ರಿಲ್ಲರ್ ಚಿತ್ರವಾಗಿರೋ ಲೆಗಸಿ ಚಿತ್ರ ಶೂಟಿಂಗ್ ಭರದಿಂದ ನಡೆಯುತ್ತಿದ್ದು, ಅಚ್ಯುತ್ ಕುಮಾರ್, ಮುಖ್ಯ ಮಂತ್ರಿ ಚಂದ್ರು, ತರಂಗ ವಿಶ್ವ, ಮಿಶಾ ನಾರಂಗ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸುರೇಶ್ ರಾಜ್ ಮ್ಯೂಸಿಕ್, ಸುಂದರ್ ಪಂಡಿಯಾನ್ ಕ್ಯಾಮೆರಾ ವರ್ಕ್ ಲೆಗಸಿ ಚಿತ್ರಕ್ಕಿದೆ. ಫಸ್ಟ್ ಲುಕ್ ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿರೋ ಈ ಚಿತ್ರ ಸದ್ಯದಲ್ಲೇ ಚಿತ್ರದ ಇನ್ನಷ್ಟು ಡೀಟೈಲ್ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next