Advertisement

Vidya Balan; ಮತ್ತೆ ಬಂದಳು ಮಂಜುಳಿಕಾ!

09:51 AM Oct 06, 2024 | Team Udayavani |

ಬಾಲಿವುಡ್‌ನ‌ಲ್ಲಿ ಈಗ ಹಾರರ್‌ ಕಾಮಿಡಿ ಚಿತ್ರಗಳೇ ಹೆಚ್ಚು ಸದ್ದು ಮಾಡುತ್ತಿವೆ. ಜೊತೆಗೆ ಮುಂದುವರೆದ ಭಾಗಗಳ ಕ್ರೇಜ್‌ ಪ್ರೇಕ್ಷಕರನ್ನು ಮತ್ತೆ ಸಿನಿಮಾದತ್ತ ನೋಡುವಂತೆ ಮಾಡುತ್ತಿವೆ. ಈಗ ಅದೇ ಸಾಲಿನಲ್ಲಿ ಬರುತ್ತಿದೆ “ಭೂಲ್‌ ಭುಲೈಯಾ 3′.

Advertisement

2007ರಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ವಿದ್ಯಾ ಬಾಲನ್‌ ನಟನೆಯ “ಭೂಲ್‌ ಭುಲೈಯಾ’ (Bhool Bhulaiya) ಚಿತ್ರ ಬಿಡುಗಡೆಗೊಂಡಿತ್ತು. ನಂತರ 2022ರಲ್ಲಿ “ಭೂಲ್‌ ಭುಲೈಯಾ 2′ ಚಿತ್ರ ತೆರೆಕಂಡಿತ್ತು. ತಬು, ಕಾರ್ತಿಕ್‌ ಆರ್ಯನ್‌ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈಗ ಸರಣಿ ಮುಂದುವರೆದು ಮೂರನೇ ಭಾಗಕ್ಕೆ ಚಿತ್ರ ಬಂದಿದೆ. ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಗೊಂಡಿದೆ.

ಟೀಸರ್‌ನಲ್ಲಿ ನಟಿ ವಿದ್ಯಾ ಬಾಲನ್‌ (Vidya Balan) ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ. ಇದರ ಜೊತೆಗೆ ತೃಪ್ತಿ ದಿಮ್ರಿ ಕೂಡ ಹೊಸದಾಗಿ ಸರಣಿ ಚಿತ್ರಕ್ಕೆ ಸೇರಿಕೊಂಡಿದ್ದಾರೆ. ನವೆಂಬರ್‌ 1ರಂದು ಚಿತ್ರ ತೆರೆ ಕಾಣಲಿದೆ.

ಮೊದಲ ಎರಡು ಭಾಗದ ಸಿನಿಮಾಗಳು ಯಶಸ್ಸು ಕಾಣುವುದಲ್ಲದೇ, ಜನಪ್ರಿಯತೆಯನ್ನೂ ಗಳಿಸಿತ್ತು. ಈಗ ಮೂರನೇ ಭಾಗ ಹೇಗೆ ರಂಜಿಸಲಿದೆ ಎಂದು ಕಾದು ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next