Advertisement

ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾ ಬಾಲನ್‌

06:00 AM Jan 12, 2018 | Harsha Rao |

ಮುಂಬಯಿ: ದೇಶದ ಮೊತ್ತ ಮೊದಲ ಪ್ರಧಾನಿ ಇಂದಿರಾ ಗಾಂಧಿ ಬಗೆಗಿನ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಮಾಜಿ ಪ್ರಧಾನಿ ಪಾತ್ರವನ್ನು ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ನಿರ್ವಹಿಸಲಿದ್ದಾರೆ. ಪತ್ರಕರ್ತೆ ಸಾಗರಿಕಾ ಘೋಸ್‌ರ “ಇಂದಿರಾ: ಇಂಡಿಯಾಸ್‌ ಮೋಸ್ಟ್‌ ಪವರ್‌ಫ‌ುಲ್‌ ಪ್ರೈಮಿನಿಸ್ಟರ್‌’ ಕೃತಿಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಅದಕ್ಕೆ ಸಂಬಂಧಿಸಿದ ಹಕ್ಕುಗಳನ್ನೂ ನಟಿ ವಿದ್ಯಾ ಪಡೆದುಕೊಂಡಿದ್ದಾರೆ. “ಇಂದಿರಾ ಪಾತ್ರ ನನ್ನ ಬಹುಕಾಲದ ಕನಸು. ಸಾಗರಿಕಾ ಕೃತಿ ಹಕ್ಕುಗಳನ್ನು ಕೊಟ್ಟಿದ್ದು ಸಂತೋಷ.  ಸಿನಿಮಾ ಅಥವಾ ವೆಬ್‌ ಸೀರಿಸ್‌ ಮಾಡುವ ಬಗ್ಗೆ ನಿರ್ಧರಿಸಿಲ್ಲ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next