Advertisement
ಸಮಾರೋಪ ಸಮಾರಂಭದ ಅಂಗವಾಗಿ ಭಕ್ತ ಕುಂಬಾರ ಹರಿಕಥಾ ಕಾಲಕ್ಷೇಪ ನಡೆಯಿತು. ಹರಿಕಥೆಯ ಮಂಗಳಾರತಿಯ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
Related Articles
Advertisement
ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿ, ಹಿಂದೊಮ್ಮೆ ವಿಶ್ವನಾಥ್ ಭಟ್ ಅವರ ಹರಿಕಥೆಯನ್ನು ಆಲಿಸಿದ್ದೆ. ಅವರ ಹರಿಕಥೆಯಲ್ಲಿ ಸಾಧನೆಯ ಫಲವಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಸಹಕಾರ ನೀಡುವಂತಾಗಬೇಕು ಎಂದರು.
ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ಮಾತನಾಡಿ, ಇಂದು ಪ್ರಥಮ ಬಾರಿ ಹರಿಕಥೆಯನ್ನು ಆಲಿಸಿದ್ದೇನೆ. ನಮ್ಮ ಜ್ಞಾನ ಮನಸ್ಸಿನ ಸಮತೋಲನಕ್ಕೆ ಹರಿಕಥೆ ಪೂರಕವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ದಯಾನಂದ ಪೂಜಾರಿ ಕಲ್ವಾ ಅವರು ಮಾತನಾಡಿ, ವಿಶ್ವನಾಥ್ ಭಟ್ ಅವರ ಹರಿಕಥೆಯಲ್ಲಿ ನಮ್ಮನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವ ವಿದ್ವತ್ ಶಕ್ತಿಯಿದೆ. ಇವರ ಈ ಧಾರ್ಮಿಕ ಕಾರ್ಯಕ್ಕೆ ನಾವು ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನದ ಟ್ರಸ್ಟಿ ಗೋಪಾಲ ಪುತ್ರನ್, ಅವಿನಾಶ್ ಶಾಸಿŒ, ಸುಮಾ ವಿ. ಭಟ್, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೆರ್ಮುದೆ ಉಪಸ್ಥಿತರಿದ್ದರು.
ಗೌರವ ಸ್ವೀಕರಿಸಿ ಮಾತನಾಡಿದ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಮಾತನಾಡಿ, ಪ್ರತಿಷ್ಠಾನದ ಮೂಲಕ ನಡೆಸುವ ಎಲ್ಲ ಕಾರ್ಯಕ್ಕೆ ದಾನಿಗಳು ಸಹಕಾರ ನೀಡಿದ್ದಾರೆ. ಹರಿಕಥಾ ಸಪೊ¤àತ್ಸವ ಸಂಗ್ರಹಗೊಂಡ ದೇಣಿಗೆಯನ್ನು ಶಿಕ್ಷಣ ಕಾರ್ಯಕ್ಕೆ ಮೀಸಲಿಡಲಾಗುವುದು ಎಂದರು. ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಶೆಟ್ಟಿ ಪೆರ್ಮುದೆ ಸ್ವಾಗತಿಸಿದರು. ಜಗನ್ನಾಥ್ ಪುತ್ರನ್, ಅಶೋಕ್ ಶೆಟ್ಟಿ ಪೆರ್ಮುದೆ, ಗೋಪಾಲ್ ಪುತ್ರನ್, ಅವಿನಾಶ್ ಶಾಸ್ತ್ರೀ, ಶಶಿಧರ್ ಶೆಟ್ಟಿ ಕುಕ್ಕೆಹಳ್ಳಿ, ಸದಾನಂದ ಶೆಟ್ಟಿ, ನವೀನ್ ಪಡುಇನ್ನ, ಬಾಲಚಂದ್ರ ಭಟ್ ಅವರು ಅತಿಥಿಗಳನ್ನು ಗೌರವಿಸಿದರು.