Advertisement
ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕರು ಶಾಸಕರಿಗೆ ಸರ್ಕಾರದ ವಿರುದ್ಧ ಮಾತಾಡಬೇಡಿ, ಒಟ್ಟಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ತರೋಣ, ಅವಾಗ ನಿಮಗೆ ಅಧಿಕಾರ ಸಿಗುತ್ತದೆ ಎಂದು ಶಾಸಕರಿಗೆ ನಾಯಕರ ಕಿವಿಮಾತು ಹೇಳಿದ್ದಾರೆ.
Related Articles
Advertisement
50 ಕೋಟಿ ಅನುದಾನ ; ಪ್ರತಿ ಕ್ಷೇತ್ರ ಗಳಿಗೆ 50 ಕೋಟಿ ಅನುದಾನ ನೀಡುವಂತೆ ಶಾಸಕರು ನಾಯಕರಿಗೆ ಮನವಿ ಮಾಡಿದ್ದಾರೆ. ಚುನಾವಣೆ ವರ್ಷವಾಗಿದ್ದು ಈಗ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆಯೂ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಚುನಾವಣೆ ಹತ್ತಿರ ಬರುತ್ತಿದೆ ಅನುದಾನ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆಂದು ತಿಳಿದು ಬಂದಿದೆ. ಕ್ಷೇತ್ರದಲ್ಲಿ ಕೆಲಸ ಆಗದೆ ಮತ ಕೇಳಲು ಆಗುವುದಿಲ್ಲ ನಮ್ಮದೇ ಸರ್ಕಾರ ಅನುದಾನ ಹೆಚ್ಚಿಗೆ ನೀಡಿ ಎಂದು ಶಾಸಕರು ಆಗ್ರಹಿಸಿದ್ದು, ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಸಚಿವರ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದು, ಸಚಿವರು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಮ್ಮ ಪೈಲ್ ಗಳು ಸಚಿವರ ಬಳಿಯಿದೆ ಎಂದ ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : ಭೋಪಾಲ್ : ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ಶಾಲಾ ಬಸ್ ಚಾಲಕನ ಮನೆ ಧ್ವಂಸ ಸಂಪುಟ ವಿಸ್ತರಣೆಗೆ ಆಗ್ರಹ
ಸಚಿವ ಸಂಪುಟ ವಿಸ್ತರಣೆ ಆಗದ ವಿಚಾರ ಬಿಜೆಪಿ ನಾಯಕರ ಮೇಲೆ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಅಸಮಾಧಾನ ಹೊರ ಹಾಕಿದ್ದು, ನನ್ನನ್ನು ನಂಭಿಸಿ ದ್ರೋಹ ಮಾಡಿದ್ದೀರಿ ಎಂದು ಸಭೆಯಲ್ಲೇ ಜೋರು ಧ್ವನಿ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಂತ್ರಿ ಮಾಡ್ತೀನಿ ಅಂತಾ ನನ್ನನ್ನು ಕರೆದುಕೊಂಡು ಬಂದಿದ್ದೀರಿ.ಆ ನಂತರ ಸ್ವಲ್ಪ ದಿನ ಮಾಡಿ, ಆ ನಂತರ ನನ್ನನ್ನು ಕೈ ಬಿಟ್ಟಿದ್ದೀರಾ ಮತ್ತೆ ಕೇಳಿದ್ರೆ ನನ್ನನ್ನು ಏನು ಅಂತಾ ನೀವು ಮಾತಾಡಿಸಿಲ್ಲ. ನನ್ನ ಕ್ಷೇತ್ರದಲ್ಲಿ ಜನರು ದುಡ್ಡು ತಗೊಂಡು ಹೋದ ಅಂತಾ ಪ್ರಚಾರ ಮಾಡ್ತಿದ್ದಾರೆ
ಇದರಿಂದ ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಆಗಬೇಕು..? ನೀವು ಮಾಡಿದ್ದು ಸರೀನಾ..? ನನಗೆ ನಂಭಿಸಿ ಮೋಸ ಮಾಡಿದ್ದೀರಾ ಎಂದು ಬಿಜೆಪಿ ನಾಯಕರ ವಿರುದ್ದ ಶಂಕರ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಸಚಿವಕಾಂಕ್ಷಿಗಳು ಅಂತರ ಕಾಯ್ದುಕೊಂಡಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ ಸೇರಿ 20ಕ್ಕೂ ಹೆಚ್ಚು ಶಾಸಕರು ಸಭೆಗೆ ಗೈರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಲಿಂಬಾವಳಿ ವರ್ಸಸ್ ಅಶೋಕ್
ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ವಿರುದ್ಧ ಅರವಿಂದ ಲಿಂಬಾವಳಿ ಅಸಮಧಾನ ಹೊರಹಾಕಿದ್ದಾರೆ. ಐಟಿ ಕಂಪೆನಿಗಳು ಒತ್ತುವರಿ ಮಾಡಿಕೊಂಡಿವೆ ಎಂದು ಹೇಳಿದ್ದು ತಪ್ಪು ಎಂದ ಲಿಂಬಾವಳಿ ವಾದ ಮಾಡಿದ್ದಾರೆ. ಬಿಲ್ಡರ್ ಗಳು ಒತ್ತುವರಿ ಮಾಡಿದ್ದು ಕಂಪನಿಗಳು ಅಲ್ಲ ಅದು ನನ್ನ ಕ್ಷೇತ್ರ ಅಲ್ಲಿ ಒತ್ತುವರಿ ಬಗ್ಗೆ ನೀವು ಹೇಳಿಕೆ ನೀಡಿದರೆ ಹೇಗೆ ಎಂದ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಬೇಸರಗೊಂಡು ಸಭೆಯಿಂದಲೇ ಸಚಿವ ಆರ್ ಅಶೋಕ್ ಹೊರ ಹೋಗಿದ್ದಾರೆ ಎಂದು ತಿಳಿದು ಬಂದಿದೆ.