Advertisement

ಶಾಸಕರಿಗೆ ಕರೆ ಮಾಡಿ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

09:31 PM Jun 18, 2021 | Team Udayavani |

ಬೆಂಗಳೂರು: ಜಾಗತಿಕ ಸಾಂಕ್ರಾಮಿಕ ಕೋವಿಡ್-19ರ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರು ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರವರ ಕ್ಷೇತ್ರಗಳ ಜನತೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಖುದ್ದು ಕೋವಿಡ್‌ಗೆ ತುತ್ತಾಗಿದ್ದ ಸ್ಪೀಕರ್ ಅವರು ಅಲ್ಪ ವಿಶ್ರಾಂತಿ ನಂತರ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದು ಪ್ರತಿ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಪೀಕರ್ ಅವರ ಮಾಧ್ಯಮ ಸಮನ್ವಯಾಧಿಕಾರಿ ಎಸ್.ಎ. ಹೇಮಂತ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ಪೀಕರ್ ಅವರು ಶಾಸಕರೊಂದಿಗಿ ತಮ್ಮ ಸಂಭಾಷಣೆ ವೇಳೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರಿ ನಿಯಮಗಳಾದ ಮಾಸ್ಕ್ , ಸ್ಯಾನಿಟೈಜರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ ಮತ್ತು ಪ್ರವಾಸದ ವೇಳೆ ಸ್ಯಾನಿಟೈಸೆಷನ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮ

“ನಿಮ್ಮ ಆರೋಗ್ಯ ಮಹತ್ವದ್ದಾಗಿದೆ, ನೀವು ಆರೋಗ್ಯವಾಗಿದ್ದರೆ ಕ್ಷೇತ್ರದ ಜನತೆಯ ಆರೋಗ್ಯದತ್ತ ಹೆಚ್ಚು ಗಮನವಹಿಸಬಹುದು” ಎಂದು ಶಾಸಕರಿಗೆ ಕಿವಿಮಾತು ಹೇಳಿರುವ ಸಭಾಧ್ಯಕ್ಷ ಕಾಗೇರಿ, ಜಾಗತಿಕ ಸಾಂಕ್ರಾಮಿಕ ಕರೋನಾ ತಡೆಗೆ ತಮ್ಮ ಕ್ಷೇತ್ರದ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲಿಸುವಂತೆ ಪ್ರೇರೇಪಿಸಬೇಕು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನತೆ ಜತೆಗಿನ ನಿಮ್ಮ ಸಂಬಂಧ ಉತ್ತಮವಾಗಿರಲಿ ಮತ್ತು ಜನತೆಯ ಮೂಲಭೂತ ಅಗತ್ಯ ಮತ್ತು ಪರಿಹಾರ ಒದಗಿಸುವ ಪ್ರಯತ್ನಗಳು ಶ್ಲಾಘನೀಯ ಎಂದು ಶಾಸಕರನ್ನು ಪ್ರೇರೇಪಿಸಿದ್ದಾರೆ.

Advertisement

ಮುಂದಿನ ದಿನಗಲ್ಲಿ ಲಾಕ್‌ಡೌನ್ ವಿನಾಯ್ತಿಗಳು ಹೆಚ್ಚಿದ ಸಂದರ್ಭದಲ್ಲಿ ತಮ್ಮ ತಮ್ಮ ಕ್ಷೇತ್ರದ ಜನತೆಗೆ ಜಾಗರೂಕರಾಗಿರುವಂತೆ ಕ್ರಮವಹಿಸಬೇಕೆಂದು ಸ್ಪೀಕರ್ ತಿಳಿಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next