Advertisement

Vidhana Sabhe: ಮಾಜಿ ಸಚಿವ ನಾಗೇಂದ್ರ ಬಂಧನ ಪ್ರಕಟಿಸಿದ ಯು.ಟಿ.ಖಾದರ್‌

12:39 AM Jul 16, 2024 | Team Udayavani |

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಸಂಗತಿಯನ್ನು ಸ್ಪೀಕರ್‌ ಯು.ಟಿ. ಖಾದರ್‌ ವಿಧಾನಸಭೆಯಲ್ಲಿ ಸೋಮವಾರ ಪ್ರಕಟಿಸಿದರು. ಜಾರಿ ನಿರ್ದೇಶನಾಲಯದ ಅಧಿಕಾರಿ ದಿಲೀಪ್‌ ಮಂಗಾರ್‌ ಅವರು ಪತ್ರದ ಮೂಲಕ ನಾಗೇಂದ್ರ ಅವರನ್ನು ಜುಲೈ 12 ರಂದು ಬಂಧಿಸಿ, ಜು. 17ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುವ ವಿಚಾರ ಹಂಚಿಕೊಂಡಿದ್ದಾರೆ ಎಂದರು.

Advertisement

ಪ್ರಸಾದ್‌, ಬಂಗೇರ, ಅಪರ್ಣಾ ಸೇರಿ ಹಲವರಿಗೆ ಸಂತಾಪ
ಹಿರಿಯ ನಾಯಕ ವಿ. ಶ್ರೀನಿವಾಸ ಪ್ರಸಾದ್‌, ವಿಧಾನಸಭೆಯ ಮಾಜಿ ಉಸ ಸಭಾಧ್ಯಕ್ಷೆ ನಾಗಮ್ಮ ಕೇಶವ ಮೂರ್ತಿ, ಮಾಜಿ ಶಾಸಕ ಕೆ. ವಸಂತ ಬಂಗೇರ, ಖ್ಯಾತ ನಿರೂಪಕಿ ಅಪರ್ಣಾ, ಖ್ಯಾತ ನಟ ದ್ವಾರಕೀಶ್‌, ಸಾಹಿತಿ ಕಮಲಾ ಹಂಪನಾ, ಧರ್ಮಗುರು ಖಾಜಿ ಅಸೈಯದ್‌ ಫ‌ಝಲ್‌ ಕೋಯಮ್ಮ ತಂšಳ್‌ ಅಲ್‌ ಬುಖಾರಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ವಿಧಾನಸೌಧದಲ್ಲಿ ದದ್ದಲ್‌ ಪ್ರತ್ಯಕ್ಷ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಭೀತಿಯಲ್ಲಿರುವ ಕಾಂಗ್ರೆಸ್‌ ಶಾಸಕ ಹಾಗೂ ನಿಗಮ ಅಧ್ಯಕ್ಷ ಬಸವನಗೌಡ ದದ್ದಲ್‌ ಸೋಮವಾರ ವಿಧಾನಸೌಧದ ಕಾರಿಡಾರ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಜತೆಗೆ ವಿಧಾನಸಭೆ ಸ್ಪೀಕರ್‌ ಯು.ಟಿ ಖಾದರ್‌ ಅವರನ್ನೂ ಭೇಟಿಯಾಗಿ ತನಿಖೆ ಬಗ್ಗೆ ವಿವರಣೆ ನೀಡಿದರು ಎನ್ನಲಾಗಿದೆ. ದದ್ದಲ್‌ ನಾಪತ್ತೆ ಎಂಬ ಬಿಜೆಪಿ ಆರೋಪಕ್ಕೆ, “ನಾನು ಎಲ್ಲೂ ಹೋಗಿಲ್ಲ, ತಲೆಮರೆಸಿಕೊಂಡಿಲ್ಲ. ಊರಿಗೆ ಹೋಗಿದ್ದೆ ಅಷ್ಟೆ’ ಎಂದು ಮಾಧ್ಯಮಗಳಿಗೆ ಉತ್ತರಿಸಿ ವಿಧಾನಸೌಧದೊಳಕ್ಕೆ ತೆರಳಿದರು.

ಹಗರಣದ ಸಂಬಂಧ ಶುಕ್ರವಾರ ವಿಚಾರಣೆಗೆ ಎಸ್‌ಐಟಿ ಮುಂದೆ ಹಾಜರಾಗಿದ್ದ ದದ್ದಲ್‌ ಅನಂತರ ಬೆಂಗಳೂರಿನ ನಿವಾಸಕ್ಕೆ ಬಂದಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next