Advertisement
ಮರಿತಿಬ್ಬೇಗೌಡ ನೇತೃತ್ವದಲ್ಲಿ ಬಿ.ಕೆ. ಹರಿಪ್ರಸಾದ್, ಆರ್.ಬಿ. ತಿಮ್ಮಾಪುರ ಅವರನ್ನು ಒಳಗೊಂಡ ಸದನ ಸಮಿತಿ 84 ಪುಟಗಳ ಮಧ್ಯಂತರ ವರದಿಯನ್ನು ಸಿ.ಡಿ. ಸಹಿತ ಸದನಕ್ಕೆ ಶುಕ್ರವಾರ ಸಲ್ಲಿಸಿತು.
ಪರಿಷತ್ತಿನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಘಟನೆಯ ಬಗ್ಗೆ ಅಂತಿಮ ವರದಿ ಸಲ್ಲಿಸುವ ವರೆಗೆ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಬೇಕು ಎಂದೂ ಹೇಳಿದೆ. ವರದಿಯಲ್ಲಿ ಏನಿದೆ?
– ಕೋಟ ಶ್ರೀನಿವಾಸ ಪೂಜಾರಿ ಸಹಿತ 3 ಸಚಿವರಿಗೆ ಜವಾಬ್ದಾರಿಯುತ ಹುದ್ದೆ ಬೇಡ.
– ಅಶ್ವತ್ಥನಾರಾಯಣ, ಜೆ.ಸಿ. ಮಾಧುಸ್ವಾಮಿಗೆ 2 ಅಧಿವೇಶನಗಳಿಗೆ ನಿರ್ಬಂಧ ವಿಧಿಸಬೇಕು.
– ಪ್ರಾಣೇಶ್, ನಾರಾಯಣಸ್ವಾಮಿ, ಅರುಣ್ ಶಹಾಪುರ ಅಸಂಸದೀಯ ನಡವಳಿಕೆ ತೋರಿದ್ದಾರೆ.
– ಹೊರಟ್ಟಿ, ಶ್ರೀಕಂಠೇಗೌಡ, ಆಯನೂರು ಮಂಜು ನಾಥ್‌ರನ್ನು 2 ಅಧಿವೇಶನಕ್ಕೆ ನಿರ್ಬಂಧಿಸಬೇಕು.