Advertisement

ಚಂದಾ ಕೊಚ್ಚಾರ್‌, ಪತಿಗೆ ಲುಕ್‌ಔಟ್‌ ನೋಟಿಸ್‌?

07:00 AM Apr 08, 2018 | Team Udayavani |

ಹೊಸದಿಲ್ಲಿ: ವೀಡಿಯೋಕಾನ್‌ ಸಂಸ್ಥೆಗೆ ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ ಸಿಇಒ ಚಂದಾ ಕೊಚ್ಚಾರ್‌ಗೆ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವೀಡಿಯೋಕಾನ್‌ ಪ್ರವರ್ತಕ ವೇಣುಗೋಪಾಲ್‌ ಧೂತ್‌ ಮತ್ತು ಚಂದಾ ಪತಿ ದೀಪಕ್‌ ಕೊಚ್ಚಾರ್‌ ವಿರುದ್ಧವೂ ನೋಟಿಸ್‌ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಸಿಬಿಐ ನಿರ್ದೇಶನದ ಮೇರೆಗೆ ಎಲ್ಲ ವಿಮಾನ ನಿಲ್ದಾಣಗಳಿಗೂ ಸೂಚನೆ ನೀಡಲಾಗಿದ್ದು, ಇವರು ವಿದೇಶಕ್ಕೆ ತೆರಳಲು ಅನುಮತಿ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ತನಿಖಾ ಸಂಸ್ಥೆಗಳೂ ಖಚಿತಪಡಿಸಿಲ್ಲ. ಇನ್ನೊಂದೆಡೆ ಸಿಂಗಾಪುರಕ್ಕೆ ಪ್ರಯಾಣಿಸಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಚಂದಾ ಸಂಬಂಧಿ ರಾಜೀವ್‌ ಕೊಚ್ಚಾರ್‌ರನ್ನು 3ದಿನಗಳ ಹಿಂದೆಯೇ ವಶಕ್ಕೆ ಪಡೆಯಲಾಗಿದ್ದು, ಸತತ ವಿಚಾರಣೆ ನಡೆಸಲಾಗುತ್ತಿದೆ. ವೀಡಿಯೋಕಾನ್‌ಗೆ 3250 ಕೋಟಿ ರೂ. ಸಾಲ ನೀಡಿದ ಪ್ರಕರಣದಲ್ಲಿ ರಾಜೀವ್‌ರ ಸಂಸ್ಥೆ ಅವಿಸ್ತಾ ಅಡ್ವೆ„ಸರಿ ಗ್ರೂಪ್‌ ಕೂಡ ಪ್ರಸ್ತಾಪಿಸಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next