Advertisement

VIDEO: ಮೈಕೊರೆಯುವ ಚಳಿಯಲ್ಲಿ, 17ಸಾವಿರ ಅಡಿ ಎತ್ತರದಲ್ಲಿ ನಿಂತು ‘ವಂದೇ ಮಾತರಂ’ಎಂದ ಯೋಧರು

10:10 AM Jan 27, 2020 | Mithun PG |

ನವದೆಹಲಿ: 71ನೇ ಗಣರಾಜ್ಯೋತ್ಸವದ ಸಂಭ್ರಮ ದೇಶಾದ್ಯಂತ ಕಂಡುಬರುತ್ತಿದ್ದು, ಈ ಹಿನ್ನಲೆಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ(ಐಟಿಬಪಿ)  ಮೈ ಕೊರೆಯುವ ಚಳಿಯಲ್ಲೂ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಎಂದು ಘೋಷಣೆ ಕೂಗಿ ದೇಶಪ್ರೇಮ ಮೆರೆದಿದ್ದಾರೆ.

Advertisement

ಲಡಾಕ್ ನ ಹಿಮಾಲಯ ಶ್ರೇಣಿಯಲ್ಲಿ ಸುಮಾರು 17000 ಅಡಿ ಎತ್ತರದ ಪ್ರದೇಶದಲ್ಲಿ ಸದ್ಯ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಕೊರೆಯುವ ಚಳಿಯಲ್ಲೂ ಯೋಧರು ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಎಂದು ಉದ್ಘೋಷಗಳನ್ನು ಕೂಗಿ ರಾಷ್ಟ್ರ ಭಕ್ತಿಯನ್ನು ಮೆರೆದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು , ಯೋಧರ ರಾಷ್ಟ್ರಪ್ರೇಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next