ಬೆಂಗಳೂರು: ಯಲಹಂಕದ ಹುಣಸಮಾರನಹಳ್ಳಿಯ ವೀರಶೈವ ಜಂಗಮಮಠ ಪೀಠದ ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮೀಜಿ ಯುವತಿಯೊಬ್ಬಳ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿರುವ ವಿಡಿಯೋ ಬಹಿರಂಗಗೊಂಡಿದ್ದು, ವಿವಾದ ಸೃಷ್ಟಿಸಿದೆ.
ಸುಮಾರು 500 ವರ್ಷಗಳ ಐತಿಹಾಸಿಕ ಹಿನ್ನೆಲೆ ಇರುವ ಮಠದ ಸ್ವಾಮೀಜಿ ಯುವತಿಯ ಜೊತೆ ಸರಸ ಸಲ್ಲಾಪದಲ್ಲಿ
ತೊಡಗಿರುವ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೆ, ಮಠದ ಟ್ರಸ್ಟ್ ನ ಕೆಲವರು ಹಾಗೂ ಭಕ್ತ ವೃಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೈತಿಕ ಹೊಣೆ ಹೊತ್ತು ಸ್ವಾಮೀಜಿ ಪೀಠ ತ್ಯಜಿಸಬೇಕು ಎಂದು ಮಠದ ಟ್ರಸ್ಟ್‌ನ ಕೆಲ ಸದಸ್ಯರು ಆಗ್ರಹಿಸಿದ್ದಾರೆ ಸುದ್ದಿವಾಹಿನಿಗಳಲ್ಲಿ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಮಠದ ಆವರಣದಲ್ಲಿ ಪ್ರತಿಭಟನೆ ನಡೆಸಿ, ವಿವಾದದಲ್ಲಿ ಸಿಲುಕಿರುವ ಸ್ವಾಮೀಜಿ ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಮುಂದುವರಿದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಮಧ್ಯೆ, ದಯಾನಂದ ಸ್ವಾಮೀಜಿ ವಿರುದಟಛಿ ಕಾನೂನು ಕ್ರಮ ಜರುಗಿಸುವಂತೆ ಕೋರಿ ಮಹೇಶ್ ಎಂಬುವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಯಾಗಿ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಗಳ ಮತ್ತೂಬ್ಬ ಪುತ್ರ ಸಚ್ಚಿದಾನಂದ ಸ್ವಾಮೀಜಿ, ಮಠದ ಆವರಣದಲ್ಲಿ ಅನಗತ್ಯ ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. ಯಾವುದೇ ಪ್ರಕರಣದಲ್ಲಿ ಸಂತ್ರಸ್ಥ ಮಹಿಳೆ ತೊಂದರೆಯಾಗಿದೆ ಎಂದು ದೂರು ನೀಡಿದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಸ್ವಾಮೀಜಿ ವಿರುದಟಛಿ ಯಾವುದೇ ಮಹಿಳೆ ದೂರು ನೀಡಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.