ಬೆಂಗಳೂರು : ನಗರದ ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಸಫಾರಿ ಬಸ್ ಗೆ ನುಗ್ಗಲು ಮುಂದಾಗಿ ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಚಿರತೆ ಬಸ್ ನ ಕಿಟಕಿಗೆ ಹಾರಿ ನುಗ್ಗಲು ಮುಂದಾದಾಗ ಪ್ರವಾಸಿಗರಿಗೆ ಸಾಕಷ್ಟು ಭಯದ ವಾತಾವರಣ ನಿರ್ಮಾಣವಾಯಿತು. ಕೆಲವರು ಕಿರುಚಾಡಿದರು. ಸುರಕ್ಷತಾ ವ್ಯವಸ್ಥೆ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಈ ರೋಮಾಂಚಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಮೇಲಕ್ಕೆ ಏರಲು ಪ್ರಯತ್ನಿಸುವುದಲ್ಲದೆ, ಗಾಬರಿಗೊಂಡ ಪ್ರಯಾಣಿಕರನ್ನು ವಾಹನದ ಕಿಟಕಿಯ ಮೂಲಕ ಇಣುಕಿ ನೋಡುತ್ತಿರುವುದು ಗಮನ ಸೆಳೆದಿದೆ.
ಚಿರತೆ ಬಸ್ಸಿನ ಮೇಲೆ ನೆಗೆಯಲು ಯತ್ನಿಸಿತು ಈ ವೇಳೆ ಚಾಲಕ ವಾಹನವನ್ನು ನಿಧಾನವಾಗಿ ಮುಂದಕ್ಕೆ ಚಲಿಸಿದನು. ಚಿರತೆ ಅಲ್ಲಿಂದ ತೆರಳಿತು.
ಅಧಿಕಾರಿಗಳ ಪ್ರಕಾರ, ಭಾನುವಾರ(ಅ6) ಸಫಾರಿ ವೇಳೆ ಚಾಲಕ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆದರೆ, ಚಿರತೆ ಏಕಾಏಕಿ ಬಸ್‌ಗೆ ನುಗ್ಗಿದೆ. ಈ ದೃಶ್ಯವನ್ನು ಪ್ರವಾಸಿಗರು ಕೆಮರಾದಲ್ಲಿ ಸೆರೆ ಹಿಡಿದಿದ್ದಾರೆ.ಪ್ರವಾಸಿಗರು ಆರಂಭದಲ್ಲಿ ಆಘಾತಕ್ಕೊಳಗಾದರು ಮತ್ತು ಭಯಭೀತರಾಗಿದ್ದರು, ಆದರೆ ಶೀಘ್ರದಲ್ಲೇ ಅವರು ಸಾಂದರ್ಭಿಕವಾಗಿ ಮಂತ್ರಮುಗ್ಧರಾದರು. ಚಿರತೆಯ ಅನಿರೀಕ್ಷಿತ ನಡೆ ಸ್ವಲ್ಪ ಸಮಯದ ಭೀತಿಯನ್ನು ಸೃಷ್ಟಿಸಿತು, ಆದರೆ ಪ್ರವಾಸಿಗರು ಶೀಘ್ರದಲ್ಲೇ ಧೈರ್ಯ ತಂದುಕೊಂಡರು. ಅಪರೂಪದ ದೃಶ್ಯವನ್ನು ಆನಂದಿಸಿದರು. ಎಲ್ಲಾ ಸಫಾರಿ ವಾಹನಗಳು ಮೆಶ್ ಕಿಟಕಿಗಳನ್ನು ಹೊಂದಿರುವುದರಿಂದ,ಪ್ರವಾಸಿಗರು ಎಲ್ಲರೂ ಸುರಕ್ಷಿತವಾಗಿದ್ದರು. ಯಾರಿಗೂ ಗಾಯವಾಗಿಲ್ಲ’ ಎಂದು ತಿಳಿಸಿದ್ದಾರೆ.