Advertisement

ಗೋ ಮಾಂಸ ಸಹಿತ ವಿಡಿಯೋ ವೈರಲ್‌, ನಾಲ್ವರ ಬಂಧನ

11:09 PM Oct 29, 2019 | Team Udayavani |

ಬೆಳ್ತಂಗಡಿ: ವೇಣೂರು ಸಮೀಪದ ಕಾಶೀಪಟ್ಣ ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಿದ್ದಲ್ಲದೆ, ಗೋ ಮಾಂಸದೊಂ ದಿಗೆ ವಿಡಿಯೋ ಚಿತ್ರೀಕರಣ ಮಾಡಿ ಕೋಮುಪ್ರಚೋದನೆಗೆ ಮುಂದಾದ ನಾಲ್ವರನ್ನು ಪೊಲೀಸರು ಮಂಗಳವಾರ ಬಂಧಿಸಿ ತನಿಖೆಗೊಳಪಡಿಸಿದ್ದಾರೆ.

Advertisement

ಕಾಶಿಪಟ್ಣ ಗ್ರಾಮ ನಿವಾಸಿಗಳಾಗಿರುವ ಮನೆ ಮಾಲೀಕ ಅಬ್ದುಲ್‌ ರಹಿಮಾನ್‌ ಮತ್ತು ಇತರ ಆರೋಪಿಗಳಾದ ಇಸ್ಮಾಯಿಲ್‌, ಇಬ್ರಾಹಿಂ, ಲತೀಫ್‌, ಅಶ್ರಫ್‌ ಅವರನ್ನು ವಶಕ್ಕೆ ಪಡೆಯಲಾಗಿದೆ ದನಕರುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ, ಮಾಂಸದೊಂದಿಗೆ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದರು. ಈ ಕುರಿತು ಅ.27ರಂದು ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next