Advertisement
ಇನ್‌ಸ್ಟಾಗ್ರಾಮ್‌ನಲ್ಲಿ 6.3 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕಟಾರಿಯಾ ಅವರು ಸ್ಪೈಸ್‌ಜೆಟ್ ವಿಮಾನದ ಹಿಂದಿನ ಸಾಲಿನಲ್ಲಿ ಸಿಗರೇಟ್ ಹಚ್ಚುತ್ತಿರುವುದನ್ನು ವಿಡಿಯೋದಲ್ಲಿ ಕಂಡು ಬರುತ್ತಿದೆ.
Related Articles
Advertisement
ಈ ಘಟನೆಯ ವಿಡಿಯೋವನ್ನು ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದಾಗ, ಸಿಂಧಿಯಾ ಪ್ರತಿಕ್ರಿಯಿಸಿದ್ದು, “ಅದನ್ನು ತನಿಖೆ ಮಾಡಲಾಗುತ್ತಿದೆ. ಅಂತಹ ಅಪಾಯಕಾರಿ ನಡವಳಿಕೆಯನ್ನು ಸಹಿಸುವುದಿಲ್ಲ. ಈ ಘಟನೆಯ ವಿಡಿಯೋ ಈ ವರ್ಷದ ಜನವರಿಯಲ್ಲಿ ಅವರ ಗಮನಕ್ಕೆ ಬಂದಿತು ಮತ್ತು ಅವರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗೆ ಪತ್ರ ಬರೆದು ನಂತರ ಗುರುಗ್ರಾಮ್‌ನಲ್ಲಿರುವ ಪೊಲೀಸರಿಗೆ ದೂರು ಕಳುಹಿಸಿದ್ದಾರೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮೂಲಗಳು ಗುರುವಾರ ತಿಳಿಸಿವೆ.
“ಪೊಲೀಸರು ಆತನ ವಿರುದ್ಧ ಅಲ್ಲಿ (ಗುರುಗ್ರಾಮದಲ್ಲಿ) ದೂರು ದಾಖಲಿಸಿದ್ದಾರೆಂದು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ಸಿಐಎಸ್‌ಎಫ್ ಮೂಲವೊಂದು ತಿಳಿಸಿದೆ.
“ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಧೂಮಪಾನ ಮಾಡುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋವನ್ನು ನಮ್ಮ ಗಮನಕ್ಕೆ ತಂದಾಗ 2022 ರ ಜನವರಿಯಲ್ಲಿ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗಿದೆ ಮತ್ತು ಗುರುಗ್ರಾಮ್‌ನ ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಗೆ ವಿಮಾನಯಾನ ಸಂಸ್ಥೆ ದೂರು ದಾಖಲಿಸಿದೆ. 2022 ರ ಜನವರಿ 20 ರಂದು ದುಬೈನಿಂದ ದೆಹಲಿಗೆ ಹಾರಲು ಉದ್ದೇಶಿಸಲಾದ SG 706 ವಿಮಾನವನ್ನು ಪ್ರಯಾಣಿಕರು ಹತ್ತುತ್ತಿದ್ದಾಗ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
“21 ನೇ ಸಾಲಿನಲ್ಲಿ ಕ್ಯಾಬಿನ್ ಸಿಬಂದಿ ಆನ್-ಬೋರ್ಡಿಂಗ್ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ನಿರತರಾಗಿದ್ದಾಗ ಹೇಳಿದ ಪ್ರಯಾಣಿಕ ಮತ್ತು ಅವನ ಸಹ-ಪ್ರಯಾಣಿಕರು ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಅಥವಾ ಸಿಬಂದಿಗೆ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ಈ ವಿಷಯವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಜನವರಿ 24, 2022 ರಂದು ಏರ್‌ಲೈನ್‌ನ ಗಮನಕ್ಕೆ ಬಂದಿದೆ, ”ಎಂದು ಅದು ಹೇಳಿದೆ.