Advertisement

ಆಸ್ಟ್ರೇಲಿಯಾ ಕನ್ನಡಿಗರ ಜತೆ ವಿಡಿಯೋ ಸಂವಾದ

06:38 AM May 17, 2020 | Suhan S |

ಚಿಕ್ಕಮಗಳೂರು: ಸಚಿವ ಸಿ.ಟಿ. ರವಿ ಅವರು ಶನಿವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸ್ಕೈಪ್‌ಆ್ಯಪ್‌ ಮೂಲಕ ವಿಡಿಯೋ ಸಂವಾದ ನಡೆಸಿದರು.

Advertisement

ಆಸ್ಟ್ರೇಲಿಯಾಗೆ ಉದ್ಯೋಗ ಅರಸಿ, ಪ್ರವಾಸಕ್ಕೆ ಹೋದವರು ಹಾಗೂ ಉನ್ನತ ವ್ಯಾಸಂಗಕ್ಕೆ ತೆರಳಿದ ವಿದ್ಯಾರ್ಥಿಗಳೊಂದಿಗೆ ಕೋವಿಡ್ ದಿಂದ ಸಂಕಷ್ಟ ಎದುರಿಸುವುದು ಸೇರಿದಂತೆ ಕನ್ನಡ ಭಾಷೆ ಅಭಿವೃದ್ಧಿ ಕುರಿತು ಚರ್ಚಿಸಿದರು.1,500ಕ್ಕೂ ಹೆಚ್ಚು ಕನ್ನಡಿಗರು ಸ್ವದೇಶಕ್ಕೆ ಮರಳಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ್ದಾರೆ. ಅವರನ್ನು ಹಂತ-ಹಂತವಾಗಿ ದೇಶಕ್ಕೆ ಕರೆತರಲಾಗುವುದು ಎಂದರು.

ಕನ್ನಡ ಓದುಗರ ಅಭಿರುಚಿಗಾಗಿ ವಿದೇಶದಲ್ಲಿರುವ ಸಂಘಗಳ ವಾಚಾನಾಲಯಗಳಿಗೆ ಕನ್ನಡದ ಹಳೆಯ ಮತ್ತು ನವ್ಯ ಪುಸ್ತಕಗಳನ್ನು ನೀಡಲಾಗುವುದು. ಅಲ್ಲದೇ ಆನ್‌ಲೈನ್‌ ಕನ್ನಡ ಲೈಬ್ರರಿ ಪುಸ್ತಕಗಳನ್ನು ಅಲ್ಲಿನ ಜನರಿಗೆ ಲಭ್ಯವಾಗುವ ರೀತಿಯಲ್ಲಿ ಲಿಂಕ್‌ ಒದಗಿಸಿ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡಲಾಗುವುದು ಎಂದರು.

ರಾಜ್ಯದಲ್ಲಿ ಕೋವಿಡ್‌-19 ನಿಂದಾಗಿ ಪ್ರವಾಸೋದ್ಯಮ ಹಿನ್ನಡೆಯಾಗಿದೆ ಇದನ್ನು ಉತ್ತೇಜಿಸಲು ಜನರ ಮನೋಭಾವ ಬದಲಾಯಿಸ ದರೊಂದಿಗೆ ಸ್ಥಳೀಯರ ಪ್ರವಾಸ, ಅಂತರ್‌ ಜಿಲ್ಲಾ ಪ್ರವಾಸವನ್ನು ಹಂತ-ಹಂತವಾಗಿ ಚುರುಕು ಗೊಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ತಮ್ಮತ್ತ ಸೆಳೆಯಲು ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next