Advertisement

ಸಂಭ್ರಮವೇನೂ ಡೌನ್‌ ಆಗಿಲ್ಲ: ವರ್ಚುವಲ್‌ ವೇದಿಕೆಯಲ್ಲಿ ನಡೆಯುತ್ತಿದೆ ಸೆಲೆಬ್ರೇಷನ್!

03:37 PM Apr 23, 2020 | Hari Prasad |

ನವದೆಹಲಿ: ಕೋವಿಡ್ ಸೋಂಕು, ರೋಗ ಹರಡುವ ಭೀತಿ, ಲಾಕ್‌ ಡೌನ್‌ ನಿರ್ಬಂಧ, ಕೆಲವೆಡೆ ಸೀಲ್‌ ಡೌನ್‌ ಸೃಷ್ಟಿಸಿದ ಗೃಹಬಂಧನ… ಇವೆಲ್ಲಾ ಕಾರಣಗಳಿಂದ ಕುಟುಂಬಗಳು ಅಕ್ಷರಶಃ ಐಸೋಲೇಟ್‌ ಆಗಿವೆ.

Advertisement

ಆದರೇನಂತೆ, ನಾವು ಹುಟ್ಟುಹಬ್ಬ ಆಚರಿಸುತ್ತೇವೆ, ವಿವಾಹ ವಾರ್ಷಿಕೋತ್ಸವ ಸಂಭ್ರಮಿಸುತ್ತೇವೆ. ನಮ್ಮೀ ಆಚರಣೆ, ಸಂಭ್ರಮಕ್ಕೆ ಗೆಳೆಯರು, ಬಂಧು ಮಿತ್ರರು, ಆತ್ಮೀಯರೆಲ್ಲಾ ಸಾಕ್ಷಿಯಾಗುತ್ತಾರೆ..!!

ಇದು ಕೋವಿಡ್ ಲಾಕ್‌ಡೌನ್‌ ನಡುವೆಯೂ ಭಾರತೀಯರ ಸಂಭ್ರಮದ ಪರಿ. ಇವರೇಕೆ ಹಿಂಗಾಡ್ತಾರೆ, ಬುದ್ಧಿ ಇಲ್ವಾ, ಸ್ವಲ್ಪವೂ ಕಾಮನ್‌ ಸೆನ್ಸ್‌ ಇಲ್ವಾ ಎಂದು ಬೈಕೋಬೇಡಿ.

ಇವರ್ಯಾರೂ ಮನೆಗೆ ನೆಂಟರು, ನೆರೆಯವರು, ಸ್ನೇಹಿತರನ್ನು ಕರೆಸಿ ಪಾರ್ಟಿ ಮಾಡುತ್ತಿಲ್ಲ. ಇವರದ್ದೆಲ್ಲಾ ವರ್ಚುವಲ್‌ ಸಂಭ್ರಮ. ಮತ್ತೆ ಈ ಸಂಭ್ರಮ ಡಿಜಿಟಲ್‌ ತಂತ್ರಜ್ಞಾನದ ಕೊಡುಗೆ.

ವಿಡಿಯೋ ಕಾಲ್‌, ಕಾನ್ಫರೆನ್ಸ್‌ ಮೂಲಕ ವರ್ಚುವಲ್‌ ಪಾರ್ಟಿ ಮಾಡುತ್ತಿರುವ ಭಾರತದ ಹಲವಾರು ಮೆಟ್ರೋ ನಗರಗಳ ಕುಟುಂಬಗಳು, ಲಾಕ್‌ಡೌನ್‌ ಅವಧಿಯಲ್ಲೂ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದ ರೀತಿಯ ಸಂಭ್ರಮಗಳನ್ನು ಸುಮಧುರ ಹಾಗೂ ಸ್ಮರಣೀಯವಾಗಿಸಿ ಕೊಳ್ಳುತ್ತಿದ್ದಾರೆ.

Advertisement

ಬೆಂಗಳೂರಿನ ರಾಜಾರಾಮ್‌ ಅವರ ಮಗಳ ಹುಟ್ಟುಹಬ್ಬಕ್ಕೆ ದೆಹಲಿಯಲ್ಲಿರುವ ಅವರ ಸಹೋದರಿಯ ಸಂಪೂರ್ಣ ಕುಟುಂಬ ಸಾಕ್ಷಿಯಾಯಿತು. ವಿಡಿಯೋ ಕಾನ್ಫರೆನ್ಸ್‌ ಕಾಲ್‌ನಲ್ಲಿ ಬಂದ ಬಂಧು, ಮಿತ್ರರು, ಸ್ನೇಹಿತರೆಲ್ಲ ಬರ್ತ್‌ಡೆ ಗರ್ಲ್ ಗೆ ಶುಭಾಶಯ ಕೋರಿದರು. ಹೈದರಾಬಾದ್‌, ಕೋಲ್ಕತ್ತಾ, ಪುಣೆ, ಕೊಚ್ಚಿಯಲ್ಲೂ ಈಗ ವರ್ಚುವಲ್‌ ಪಾರ್ಟಿಗಳು ಮನೆಮಾತಾಗಿವೆ.

ವಿಶೇಷ ಏನೆಂದರೆ ಈ ಪಾರ್ಟಿಗಳಲ್ಲಿ ಉಡುಗೊರೆಗಳಿಲ್ಲ. ಅವುಗಳ ಬದಲು ಆಪ್ತೇಷ್ಟರ ಪ್ರಾಮಿಸ್‌, ಹಾರೈಕೆಗಳಿವೆ. ಬೇಕರಿ, ಕೇಕ್‌ ಪ್ಯಾಲೇಸ್‌ನಿಂದ ತರಿಸಿದ ಚಾಕೋಲೇಟ್‌, ಬಟರ್‌ ಸ್ಕಾಚ್‌, ಫೈನಾಪಲ್‌, ಸ್ಟ್ರಾಬೆರ್ರಿ ಮತ್ತಿತರ ತರಹೇವಾರಿ ಕೇಕುಗಳ ಬದಲು ಅಮ್ಮ, ಅಕ್ಕಂದಿರು ಮನೆಯಲ್ಲೇ ತಯಾರಿಸಿದ ಸೀದಾ ಸಾದಾ ಸುಂದರ ಕೇಕುಗಳಿವೆ.

ವಿಡಿಯೋದಲ್ಲೇ ವಿಷಸ್‌, ಅಲ್ಲೇ ಚಿಯರ್. ಎಲ್ಲದಕ್ಕೂ ಮುಖ್ಯವಾಗಿ ಲಾಕ್‌ಡೌನ್‌ ವೇಳೆ ಸಾಮಾಜಿಕ ಅಂತರದೊಂದಿಗೆ ಪಾರ್ಟಿ ಮಾಡಿದ ಖುಷಿ. ಜತೆಗೆ ಎಂದೆಂದೂ ನೆನಪಲ್ಲಿ ಉಳಿಯುವ ಆಚರಣೆಯ ಸಂಭ್ರಮ.

Advertisement

Udayavani is now on Telegram. Click here to join our channel and stay updated with the latest news.

Next