Advertisement

ಮೇಕಪ್‌ ಮ್ಯಾನ್‌ ಕೈಚಳಕ: ನಟಿಯ ವೀಡಿಯೋ ಬ್ಲ್ಯಾಕ್‌ಮೇಲ್: ಬಂಧನ

09:02 AM Oct 26, 2022 | Team Udayavani |

ಬೆಂಗಳೂರು: ನಟ, ನಟಿಯರೇ ಎಚ್ಚರ. ನಿಮ್ಮ ಮೇಕಪ್‌ ಮ್ಯಾನ್‌ಗಳಿಗೆ ಮೊಬೈಲ್‌ ಕೊಡುವ ಮೊದಲು ಎಚ್ಚರ ವಹಿಸಬೇಕಿದೆ. ಇಲ್ಲೊಬ್ಬ ಮೇಕಪ್‌ಮ್ಯಾನ್‌ ಹಿರಿ ಮತ್ತು ಕಿರುತೆರೆ ನಟಿಯೊಬ್ಬರ ಅರೆನಗ್ನ ವೀಡಿಯೋ ಇಟ್ಟುಕೊಂಡು 30 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಭುವನೇಶ್ವರಿನಗರ ನಿವಾಸಿ ಮಹಾಂತೇಶ್‌ (37) ಬಂಧಿತ. ಆರೋಪಿಯಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಸಂತ್ರಸ್ತೆಗೆ ಆರೋಪಿ ದೂರದ ಸಂಬಂಧಿಯಾಗಿದ್ದು, ಆಕೆಗೆ ಮೇಕಪ್‌ ಮ್ಯಾನ್‌ ಕೂಡ ಆಗಿದ್ದ. ಹೀಗಾಗಿ ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ. ಸಂತ್ರಸ್ತ ನಟಿ ಆ್ಯಪ್‌ವೊಂದರಲ್ಲಿ ಖಾತೆ ತೆರೆದು, ತನ್ನ ಅರೆ ನಗ್ನ ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿ ದ್ದರು. ಇಂತಹ ಲೈವ್‌ ಸ್ಟ್ರೀಮಿಂಗ್‌ ಆ್ಯಪ್‌ಗಳಲ್ಲಿ ಹಣ ಪಾವತಿಸಿ, ಸಬ್‌ಸೆð„ಬ್‌ ಮಾಡಿಕೊಂಡರೆ ಮಾತ್ರ ಕೆಲ ವೀಡಿಯೋಗಳನ್ನು ನೋಡಲು ಅವಕಾಶ ಇರುತ್ತದೆ. ಈ ಬಗ್ಗೆ ಆಕೆಯ ಕುಟುಂಬ ಸದಸ್ಯರಿಗೂ ಮಾಹಿತಿ ಇರಲಿಲ್ಲ. ಈ ಎಲ್ಲ ಮಾಹಿತಿಯನ್ನು ತಿಳಿದುಕೊಂಡ ಆರೋಪಿ, ಹೊಸ ಮೊಬೈಲ್‌ ನಂಬರ್‌ನಿಂದ ಸಂದೇಶ ಕಳುಹಿಸಿ, ತನ್ನ ಬಳಿ ನಿಮ್ಮ ನಗ್ನ ಮತ್ತು ಅರೆ ನಗ್ನ ವೀಡಿಯೋಗಳು ಇರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡದಿರಲು 30 ಲಕ್ಷರೂ.ಗೆ ಬೇಡಿಕೆ ಇಟ್ಟಿದ್ದ. ಆಕೆ ಪೊಲೀಸರಿಗೆ ದೂರು ನೀಡಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next