ತುಮಕೂರು ಗ್ರಾಮಾಂತರ: ಕಚೇರಿಯಲ್ಲಿಯೇ ಮಹಿಳೆಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಎದುರಿಸುತ್ತಿರುವ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಬಂಧನದ ಬೆನ್ನಲ್ಲೆ ಅವರ ವಿರುದ್ಧದ ಒಂದೊಂದೇ ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿವೆ.
ಡಿವೈಎಸ್‌ಪಿ ರಾಮಚಂದ್ರಪ್ಪ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮತ್ತೂಬ್ಬ ಸಂತ್ರಸ್ತೆ ಮಹಿಳೆ ವಿಡಿಯೋ ಮೂಲಕ ತನ್ನ ಅಳಲು ತೊಡಿಕೊಂಡಿದ್ದಾರೆ.
ಈ ಪ್ರಕರಣವೂ ಸಹ ದೂರು ಕೊಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪವಾಗಿದೆ. ತಂದೆ ಸಮಾನ ಅಂತ ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಗಂಡನನ್ನ ಹೊರಗೆ ಕೂರಿಸಿ ಸಂತ್ರಸ್ತೆಯನ್ನ ರೂಮಿಗೆ ಕರೆದು ಕಿರುಕುಳ ಕೊಟ್ಟಿದ್ದಾರೆ ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಮಹಿಳೆ ದೂರಿದ್ದಾಳೆ. ಫೇಸ್‌ಬುಕ್‌ನಲ್ಲಿ ಪರಿಚಿತನಿಗೆ ಸಾಲ ನೀಡಿ ಹಣ ಕಳೆದು ಕೊಂಡಿದ್ದ ಸಂತ್ರಸ್ತೆ ಮಹಿಳೆ ಹಣ ಕೊಡಿಸುವಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
10-12 ಲಕ್ಷ ರೂ. ಸಾಲಕೊಟ್ಟು ಹಣ ಕಳೆದುಕೊಂಡಿದ್ದ ಸಂತ್ರಸ್ತೆಯ ದೂರನ್ನು ಪರಿ ಶೀಲಿಸುವಂತೆ ಮಹಿಳಾ ಆಯೋಗದಿಂದ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನ ಆಧಾರದ ಮೇಲೆ ಸಂತ್ರಸ್ತೆಗೆ ಡಿವೈಎಸ್ಪಿ ಕರೆ ಮಾಡಿದ್ದರು. ನಂತರ ಸಂತ್ರಸ್ತೆಗೆ ವಿಡಿಯೋ ಕಾಲ್ ಮಾಡಿ ಡಿವೈಎಸ್ಪಿ ಕಚೇರಿಗೆ ಬರುವಂತೆ ಹೇಳಿದ್ದರು. ಠಾಣೆಗೆ ಬಂದ ಮಹಿಳೆಯನ್ನು ವಿಚಾರಣೆ ನೆಪದಲ್ಲಿ ರೂಮಿಗೆ ಕರೆದೊಯ್ದು ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ನೀವು ತಂದೆ ಸಮಾನ ಅಂತ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರೂ ಡಿವೈಎಸ್‌ಪಿ ಬಿಡದೆ 500 ರೂ. ನೀಡಿ ಸುಮ್ಮನಿರುವಂತೆ ಪುಸಲಾಯಿಸಿದ್ದ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ.