Advertisement

ಸೋಲಿನಿಂದ ಗೆಲುವು ಅವಮಾನದಿಂದಲೇ ಸಮ್ಮಾನ

08:41 PM Apr 26, 2021 | Team Udayavani |

ಸೋಲು-ಗೆಲುವು ಬದುಕಿನಲ್ಲಿ ಸಾಮಾನ್ಯ. ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸೋಲು ಅನುಭವಿಸಿದಾಗ ಕುಗ್ಗಬಾರದು.

Advertisement

ಹಾಗೆಯೇ ಹಿಂಜರಿಯಬಾರದು. ಅದೇ ರೀತಿಯಾಗಿ ಸೋಲು- ಗೆಲುವಿನ ಮೊದಲ ಮೆಟ್ಟಿಲುಗಳೆಂದು ಮುನ್ನಡೆಯಬೇಕು. ಸೋತ ನಮಗೆ ಮುಂದಿನ ಪ್ರಯತ್ನದಿಂದ ಗೆಲುವು ಕಟ್ಟಿಟ್ಟ ಬುತ್ತಿ. ಆದರೆ ಸಾಧನೆ ಕಡೆಗೆ ಸಾಗಬೇಕಾದರೆ ಸತತವಾದ ಪರಿಶ್ರಮ ಪಡಲೇಬೇಕು. ಅದೇ ರೀತಿಯಾಗಿ ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡುವಂತಹ ಸಮಯದಲ್ಲಿ ಯಾರಾದರೂ ಅವಮಾನವನ್ನು ಮಾಡಿಯೇ ಮಾಡುತ್ತಾರೆ.

ಅವಮಾನದಿಂದ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿ ಗಟ್ಟಿಗೊಳಿಸಿ ನಿಮ್ಮಲ್ಲಿ ಗೆಲ್ಲಬೇಕು ಎಂಬ ಹಠ ಮೂಡಬೇಕು. ಒಂದಲ್ಲ ಒಂದು ದಿನ ಗೆದ್ದು ಅವಮಾನ ಮಾಡಿಸಿಕೊಂಡವರಲ್ಲಿ ಸಮ್ಮಾನವನ್ನು ಮಾಡಿಸಿಕೊಳ್ಳಬೇಕು. ಅದೇ ಜೀವನದ ಪರಮೋತ್ಛ ಗುರಿಯಾಗಬೇಕು.

ಈ ದೇಶ ನಿನ್ನ ಪ್ರತಿಭೆಯನ್ನು, ಯಶಸ್ಸಿನ ಕಠಿನ ಹಾದಿಯನ್ನು ಕೊಂಡಾಡುವಂತಾಗಬೇಕು. ಗುರಿಯ ಕಡೆಗೆ ಗಮನವಿದ್ದಾಗ, ಸದಾ ಮನದಲ್ಲಿ ಸಾಧನೆಯ ಕನಸು ಕಾಣುವಂತಾಗಬೇಕು. ಇಡೀ ಪ್ರಪಂಚವೇ ನಮ್‌ ಕಡೆ ತಿರುಗಿ ಸಲಾಂ ಹೊಡೆಯುವಂತಾಗಬೇಕು. ಸಾಧನೆಯ ಹಸಿವು, ಗೆಲುವಿನ ಹಾಹಾಕಾರ ಕಾಡುತ್ತಲೇ ಇರಬೇಕು. ಇಂತಹ ಸಾಧನೆಯನ್ನು ಮಾಡಿದವರಲ್ಲಿ ಒಬ್ಬರೆನಿಸಿದ, ಜಾತಿ ಎಂಬ ವಿಷ ಬೀಜವ ಕಿತ್ತೆಸೆದ, ಸರಸ್ವತಿ ಪುತ್ರ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ರೋಮಾಂಚಕವಾದುದು. ಅಷ್ಟೇ ಕಷ್ಟವಾದದ್ದು. ಅಂಬೇಡ್ಕರ್‌ ಜೀ ಅವರನ್ನು ಜಾತಿಯ ಹಣೆಪಟ್ಟಿಯಿಂದ ಅವಮಾನ, ಹಿಂಸೆಗೆ ಅನುಭವಿಸಿದರೂ ಮುಂದೆ ತಮ್ಮ ಪ್ರತಿಭೆಯಿಂದ ಜಗತ್ತನ್ನೇ ಬೆಳಗುವ ಸಂವಿಧಾನ ನೀಡಿದರು.

ಇನ್ನು ಅಂತೆಯೇ ವಿಶ್ವೇಶ್ವರಯ್ಯನವರು ತಮ್ಮ ಬಡತನದ ನಡುವೆ ಕಂದೀಲು ಬೆಳಕಿನಲ್ಲಿ ಓದಿ ದೇಶ ಕಂಡ ಶ್ರೇಷ್ಠ ಎಂಜಿನಿಯರ್‌ರಾದರು. ಹಾಗಾಗಿ ಸಾಧನೆ ಎಂಬುದು ಯಾವತ್ತೂ ಸ್ವಾರ್ಥಿ ಅಥವಾ ವಿಲಾಸಿಗಳ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬುದು ಸರ್ವವಿಧಿತ.

Advertisement

ಕೇವಲ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಬಡವನ ಮಗ ಇಂದು ಪ್ರಪಂಚದ ದೊಡ್ಡ ಶ್ರೀಮಂತನಾದ ಕಥೆ ನಾವೆಲ್ಲರೂ ಕೇಳಿರುತ್ತೇವೆ. ಇಂತಹ ಕಥೆಗಳು ನಮಗೆ ಸ್ಫೂರ್ತಿಯಾಗಬೇಕು. ಸ್ಫೂರ್ತಿ ಎಂಬುದು ಬೆಳಕಿನ ಕಿಡಿ ಇದ್ದಂತೆ. ಇದು ನಮ್ಮನ್ನು ಆವರಿಸಿದರೆ ಸಾಕು ನಾವು ಜಗತ್ತಿಗೆ ಬೆಳಕು ಆಗಲು ಸಾಧ್ಯ. ಇಂತಹ ಸ್ಫೂರ್ತಿಗೆ ಹಲವಾರು ಜನರು ಈಗಲೂ ನಮ್ಮ ಮುಂದೆ ಇದ್ದಾರೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಕ್ರೀಡಾಳುಗಳು, ಕಲಾವಿದರು, ಸಾಹಿತಿಗಳು ಸಾಧನೆಯ ಹಿಂದೆ ಹಲವು ರೀತಿಯ ಕಷ್ಟ-ನಷ್ಟಗಳನ್ನು ಅನುಭವಿಸಿದವರೇ ಈ ವಿಚಾರವಾಗಿ ನನಗೆ ಕರ್ನಾಟಕ ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣನವರು ಸ್ಫೂರ್ತಿಯಾಗುತ್ತಾರೆ. ಅವರ ಬದುಕು-ಕರ್ತವ್ಯ ವೈಯಕ್ತಿಕವಾಗಿ ನನಗೆ ಪ್ರೇರಣೆಯಾದುದು.

ಬಡತನ ಎಂಬ ಬೇಗೆಯನ್ನು ಅವರು ಸರಿಯಾಗಿ ಮೆಟ್ಟಿ ನಿಂತು ಇಂದು ದೊಡ್ಡ ಅಧಿಕಾರಿಯಾಗಿದ್ದಾರೆ. ಇದೇ ನನಗೆ ಪ್ರೇರಣೆ. ಇದು ನಾನು ಬೆಳಕಾಗಲು ಕಿಡಿ ಎಂಬುದು ನನಗೆ ಅನಿಸಿದೆ.

ಶಬರೀಶ್‌ ಶಿರ್ಲಾಲ್‌, ಎಂಪಿಎಂ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next