Advertisement

ಗುವಾಹಟಿಯಲ್ಲಿ ಗೆಲುವು; ಟೀಮ್‌ ಇಂಡಿಯಾಕ್ಕೆ ಸರಣಿ

11:24 PM Oct 02, 2022 | Team Udayavani |

ಗುವಾಹಟಿ: ರವಿವಾರದ ಬೃಹತ್‌ ಮೊತ್ತದ ದ್ವಿತೀಯ ಟಿ20 ಪಂದ್ಯವನ್ನು 16 ರನ್ನುಗಳಿಂದ ಗೆದ್ದ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಕಿಲ್ಲರ್‌ ಮಿಲ್ಲರ್‌ ಸಿಡಿಸಿದ ಶತಕ, ರಾಹುಲ್‌, ಕೊಹ್ಲಿ, ಸೂರ್ಯ, ಡಿ ಕಾಕ್‌ ಅವರ ಬ್ಯಾಟಿಂಗ್‌ ವೈಭವ ಈ ಪಂದ್ಯದ ರಂಗನ್ನು ಹೆಚ್ಚಿಸಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೂರೇ ವಿಕೆಟಿಗೆ 237 ರನ್‌ ರಾಶಿ ಹಾಕಿದರೆ, ದಕ್ಷಿಣ ಆಫ್ರಿಕಾ 3 ವಿಕೆಟಿಗೆ 221 ರನ್‌ ಮಾಡಿತು. ಡೇವಿಡ್‌ ಮಿಲ್ಲರ್‌ ಅಜೇಯ 106 ರನ್‌ ಬಾರಿಸಿದರು. ಡಿ ಕಾಕ್‌ ಗಳಿಕೆ ಅಜೇಯ 69.

3 ವಿಕೆಟ್‌ ಬೇಗನೆ ಉರುಳಿದ ಬಳಿಕ ಜತೆಯಾದ ಡಿ ಕಾಕ್‌-ಮಿಲ್ಲರ್‌ ಮುನ್ನುಗ್ಗಿ ಬಾರಿಸಲಾರಂಭಿಸಿದರೂ ಕಠಿನ ಸವಾಲು ಎದುರಿದ್ದುದರಿಂದ ಗುರಿ ಮುಟ್ಟಲಾಗಲಿಲ್ಲ. ಇವರು 4ನೇ ವಿಕೆಟಿಗೆ 84 ಎಸೆತಗಳಿಂದ 174 ರನ್‌ ಪೇರಿಸಿದರು.

ರಾಹುಲ್‌ ಸತತ ಫಿಫ್ಟಿ
ಭಾರತಕ್ಕೆ ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ಪ್ರಚಂಡ ಆರಂಭ ಒದಗಿಸಿದರು. ಆರಂಭದಿಂದಲೇ ಮುನ್ನುಗ್ಗಿ ಬೀಸತೊಡಗಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬಂತು. ಪವರ್‌ ಪ್ಲೇಯಲ್ಲಿ 57 ರನ್‌ ಒಟ್ಟುಗೂಡಿತು. ಇದರೊಂದಿಗೆ ರಾಹುಲ್‌-ರೋಹಿತ್‌ ಟಿ20ಯಲ್ಲಿ ಅತ್ಯಧಿಕ 15 ಸಲ “50 ಪ್ಲಸ್‌’ ರನ್‌ ಜತೆಯಾಟ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಪಾಕಿಸ್ಥಾನದ ಬಾಬರ್‌ ಆಜಂ-ಮೊಹಮ್ಮದ್‌ ರಿಜ್ವಾನ್‌ 14 ಸಲ ಈ ಸಾಧನೆಗೈದಿದ್ದಾರೆ.

ಮೊದಲ ವಿಕೆಟಿಗೆ 9.5 ಓವರ್‌ಗಳಿಂದ 96 ರನ್‌ ಒಟ್ಟುಗೂಡಿತು. ಆಗ ಮಹಾರಾಜ್‌ ಮೊದಲ ಬ್ರೇಕ್‌ ಒದಗಿಸಿದರು. 43 ರನ್‌ ಮಾಡಿದ ರೋಹಿತ್‌ ವಿಕೆಟ್‌ ಉರುಳಿತು. 37 ಎಸೆತ ಎದುರಿಸಿದ ರೋಹಿತ್‌ 7 ಫೋರ್‌, ಒಂದು ಸಿಕ್ಸರ್‌ ಸಿಡಿಸಿದರು.

Advertisement

ಇನ್ನೊಂದೆಡೆ ರಾಹುಲ್‌ ಬ್ಯಾಟಿಂಗ್‌ ಅಬ್ಬರ ಮುಂದುವರಿಯಿತು. ಮಾರ್ಕ್‌ರಮ್‌ ಎಸೆತವನ್ನು ಸಿಕ್ಸರ್‌ಗೆ ರವಾನಿಸಿ 20ನೇ ಅರ್ಧ ಶತಕ ಪೂರ್ತಿಗೊಳಿಸಿದರು. ಇದು ಈ ಸರಣಿಯಲ್ಲಿ ರಾಹುಲ್‌ ಬಾರಿಸಿದ ಸತತ 2ನೇ ಫಿಫ್ಟಿ. ತಿರುವನಂತಪುರದಲ್ಲಿ ಅಜೇಯ 51 ರನ್‌ ಮಾಡಿದ್ದರು.

ರಾಹುಲ್‌ ವಿಕೆಟ್‌ ಕೂಡ ಮಹಾರಾಜ್‌ ಬುಟ್ಟಿಗೆ ಬಿತ್ತು. 57 ರನ್‌ ಮಾಡಿದ ಅವರು ಲೆಗ್‌ ಬಿಫೋರ್‌ ಆಗಿ ವಾಪಸಾಗಬೇಕಾಯಿತು. ಕೇವಲ 28 ಎಸೆತ ಎದುರಿಸಿದ ರಾಹುಲ್‌ 4 ಸಿಕ್ಸರ್‌, 5 ಬೌಂಡರಿ ಬಾರಿಸಿ ಗುವಾಹಟಿ ವೀಕ್ಷಕರನ್ನು ರಂಜಿಸಿದರು.

ಸೂರ್ಯ ವಿಶಿಷ್ಟ ದಾಖಲೆ
ಹರಿಣಗಳ ಬೌಲರ್‌ಗಳನ್ನು ಬೆದರಿಸುವ ಮುಂದಿನ ಸರದಿ ಸೂರ್ಯಕುಮಾರ್‌ ಯಾದವ್‌ ಅವರದಾಯಿತು. ಎಂದಿನ ಆಕ್ರಮಣ ಕಾರಿ ಆಟವನ್ನು ಅವರು ಇಲ್ಲಿಯೂ ಮುಂದುವರಿಸಿದರು. ರಬಾಡ ಅವರ ಒಂದೇ ಓವರ್‌ನಲ್ಲಿ 22 ರನ್‌ ಸೋರಿ ಹೋಯಿತು. ಈ ವೇಳೆ ಸೂರ್ಯ ಟಿ20 ಕ್ರಿಕೆಟ್‌ನಲ್ಲಿ ಅತೀ ಕಡಿಮೆ 573 ಎಸೆತಗಳಿಂದ ಸಾವಿರ ರನ್‌ ಪೂರ್ತಿ ಗೊಳಿಸಿದ ದಾಖಲೆಯನ್ನೂ ನಿರ್ಮಿಸಿ ದರು. ಹಿಂದಿನ ದಾಖಲೆ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಹೆಸರಲ್ಲಿತ್ತು (604 ಎಸೆತ).

18 ಎಸೆತಗಳಲ್ಲಿ ಸೂರ್ಯಕುಮಾರ್‌ 9ನೇ ಅರ್ಧ ಶತಕ ಪೂರೈಸಿದರು. ಇದು ಭಾರತ ಅತೀ ವೇಗದ 2ನೇ ಅರ್ಧ ಶತಕದ ಜಂಟಿ ದಾಖಲೆ. ರಾಹುಲ್‌ ಕೂಡ 18 ಎಸೆತಗಳಲ್ಲಿ 50 ರನ್‌ ಬಾರಿಸಿದ್ದರು. ಯುವರಾಜ್‌ ಸಿಂಗ್‌ 12 ಎಸೆತಗಳಲ್ಲಿ ಫಿಫ್ಟಿ ಹೊಡೆದದ್ದು ದಾಖಲೆ. ಸೂರ್ಯ ಕೇವಲ 22 ಎಸೆತಗಳಿಂದ 61 ರನ್‌ ಹೊಡೆದರು. 5 ಸಿಕ್ಸರ್‌, 5 ಬೌಂಡರಿ ಈ ಆಟದ ಮೆರುಗು ಹೆಚ್ಚಿಸಿತು.

ಆರಂಭದಲ್ಲಿ ಎಚ್ಚರಿಕೆಯ ಆಟವಾ ಡಿದ ವಿರಾಟ್‌ ಕೊಹ್ಲಿ, ಅನಂತರ ಮುನ್ನುಗ್ಗಿ ಬೀಸತೊಡಗಿದರು. ಈ ಜೋಡಿ ಕೇವಲ 41 ಎಸೆತಗಳಲ್ಲಿ ಶತಕದ ಜತೆಯಾಟ ದಾಖಲಿಸಿತು. ಕೊನೆಯ ಓವರ್‌ನಲ್ಲಿ ದಿನೇಶ್‌ ಕಾರ್ತಿಕ್‌ ಸಿಡಿದುದರಿಂದ ಕೊಹ್ಲಿಗೆ ಒಂದು ರನ್ನಿನಿಂದ ಅರ್ಧ ಶತಕ ತಪ್ಪಿತು.

ಸ್ಕೋರ್‌ ಪಟ್ಟಿ

ಭಾರತ
ಕೆ.ಎಲ್‌. ರಾಹುಲ್‌ ಎಲ್‌ಬಿಡಬ್ಲ್ಯು ಮಹಾರಾಜ್‌ 57
ರೋಹಿತ್‌ ಶರ್ಮ ಸಿ ಸ್ಟಬ್ಸ್ ಬಿ ಮಹಾರಾಜ್‌ 43
ವಿರಾಟ್‌ ಕೊಹ್ಲಿ ಔಟಾಗದೆ 49
ಸೂರ್ಯಕುಮಾರ್‌ ರನೌಟ್‌ 67
ದಿನೇಶ್‌ ಕಾರ್ತಿಕ್‌ ಔಟಾಗದೆ 17
ಇತರ 10
ಒಟ್ಟು (3 ವಿಕೆಟಿಗೆ) 237
ವಿಕೆಟ್‌ ಪತನ: 1-92, 2-107, 3-209.
ಬೌಲಿಂಗ್‌:
ಕಾಗಿಸೊ ರಬಾಡ 4-0-57-0
ವೇನ್‌ ಪಾರ್ನೆಲ್‌ 4-0-54-0
ಲುಂಗಿ ಎನ್‌ಗಿಡಿ 4-0-49-0
ಕೇಶವ್‌ ಮಹಾರಾಜ್‌ 4-0-23-2
ಆ್ಯನ್ರಿಚ್‌ ನೋರ್ಜೆ 3-0-41-0
ಐಡನ್‌ ಮಾರ್ಕ್‌ರಮ್‌ 1-0-9-0

ದಕ್ಷಿಣ ಆಫ್ರಿಕಾ
ಟೆಂಬ ಬವುಮ ಸಿ ಕೊಹ್ಲಿ ಬಿ ಅರ್ಷದೀಪ್‌ 0
ಕ್ವಿಂಟನ್‌ ಡಿ ಕಾಕ್‌ ಔಟಾಗದೆ 69
ರಿಲೀ ರೋಸ್ಯೂ ಸಿ ಕಾರ್ತಿಕ್‌ ಬಿ ಅರ್ಷದೀಪ್‌ 0
ಐಡನ್‌ ಮಾರ್ಕ್‌ರಮ್‌ ಬಿ ಅಕ್ಷರ್‌ 33
ಡೇವಿಡ್‌ ಮಿಲ್ಲರ್‌ ಔಟಾಗದೆ 106
ಇತರ 13
ಒಟ್ಟು (3 ವಿಕೆಟಿಗೆ) 221
ವಿಕೆಟ್‌ ಪತನ: 1-1-1, 2-1, 3-47.
ಬೌಲಿಂಗ್‌:
ದೀಪಕ್‌ ಚಹರ್‌ 4-1-24-0
ಅರ್ಷದೀಪ್‌ ಸಿಂಗ್‌ 4-0-62-2
ಆರ್‌. ಅಶ್ವಿ‌ನ್‌ 4-0-37-0
ಅಕ್ಷರ್‌ ಪಟೇಲ್‌ 4-0-53-1
ಹರ್ಷಲ್‌ ಪಟೇಲ್‌ 4-0-45-0

 

 

Advertisement

Udayavani is now on Telegram. Click here to join our channel and stay updated with the latest news.

Next