Advertisement

ಬಸ್ರೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವಿಜಯದ ದಿನಾಚರಣೆ

12:59 AM Feb 14, 2022 | Team Udayavani |

ಬಸ್ರೂರು: ಛತ್ರಪತಿ ಶಿವಾಜಿ ಮಹಾರಾಜರು ಪೋರ್ಚುಗೀಸರ ವಿರುದ್ಧ ಪ್ರಥಮ ನೌಕಾಯಾನ ಕೈಗೊಂಡು, ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ದಿನ 1665ರ ಫೆ. 13 ಆಗಿದ್ದು, ಅದರ ಸವಿನೆನಪಿಗಾಗಿ ಬಸೂÅರಿನ ಛತ್ರಪತಿ ಶಿವಾಜಿ ಅಭಿಮಾನಿ ಬಳಗದಿಂದ “ಬಸ್ರೂರು ಸ್ವಾತಂತ್ರ್ಯ ದಿನಾಚರಣೆ’ ಕಾರ್ಯಕ್ರಮ ರವಿವಾರ ಬಸ್ರೂರಿನ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

Advertisement

ಭಾರತೀಯ ಸಂತಸಭಾದ ಸಂಘಟನ ಪ್ರಧಾನ ಕಾರ್ಯದರ್ಶಿ ಡಾ| ಸಂದೀಪ್‌ ರಾಜ್‌ ಮಹದೇವ ರಾವ್‌ ಮಹಿಂದ್‌ ಪುಣೆ ಮಾತನಾಡಿದರು. 357 ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರು ಬಸ್ರೂರಿಗೆ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಟ್ಟಿಲ್ಲ. ಭಾರತದಿಂದ ಪೋರ್ಚುಗೀಸರು ತೊಲಗಲು ಅದೇ ದಿನ ಅಡಿಗಲ್ಲನ್ನು ಹಾಕಿದ್ದರು. ಅಂಥವರ ನೆನಪಿನಲ್ಲಿ ಬಸ್ರೂರಿನಲ್ಲಿ 9 ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿರುವುದು ಗಮನಾರ್ಹ. ಪ್ರಮುಖ ವ್ಯಾಪಾರ ಕೇಂದ್ರ, ಬಂದರು ಪ್ರದೇಶವಾಗಿದ್ದ ಈ ಊರಿಗೆ ಇತಿಹಾಸದಲ್ಲಿ ಹೆಚ್ಚು ಪ್ರಾಮುಖ್ಯ ಇದೆ ಎಂದರು.

ಭಾರತೀಯ ಇತಿಹಾಸ ಸಂಕಲನ ಸಮಿತಿಯ ಮಹಿಳಾ ಪ್ರಮುಖ್‌ ಡಾ| ಸೀಮಾ ಉಪಾಧ್ಯಾಯ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಿವಾಜಿ ಮಹಾರಾಷ್ಟ್ರಕ್ಕೆ ಸೀಮಿತರಾದವರಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಶ್ರಮಿಸಿದ ಮಹಾನ್‌ ವ್ಯಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಚೈತ್ರಾ ಕುಂದಾಪುರ, ಭಜರಂಗ ದಳ ತಾಲೂಕು ಸಂಚಾಲಕ ಸುಧೀರ್‌ ಮೇರ್ಡಿ ಮತ್ತಿತರರು ಭಾಗವಹಿಸಿದ್ದರು.

ಮೆರವಣಿಗೆ
ಇದಕ್ಕೆ ಮುನ್ನ ಬಸ್ರೂರಿನ ಮಂಡಿಕೇರಿ ಹೊಳೆಬಾಗಿಲಿನಿಂದ ಶ್ರೀ ದೇವಿ ದೇಗುಲದ ವರೆಗೆ ಸಾಂಪ್ರದಾಯಿಕ ಶೋಭಾಯಾತ್ರೆ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಉಮೇಶ್‌ ಆಚಾರ್ಯ ಬಸ್ರೂರು ಸ್ವಾಗತಿಸಿ, ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್‌ ಜಿ. ಕೆಳಮನೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next