Advertisement
ಭಾನುವಾರ ಸಂಜೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಸಭೆಯಲ್ಲಿ ಭಾಗವಿಸಿ ಮಾತನಾಡಿದರು. ”ಇಂದು ಪ್ರತಿ ಪ್ರಥಮ ಬಾರಿಗೆ ಮತದಾರ ನಾನೇ ಗೆದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.ಈ ಗೆಲುವಿನಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಗೆಲುವನ್ನು ಕಾಣುತ್ತಿದ್ದಾಳೆ.ಈ ಗೆಲುವಿನಲ್ಲಿ ಉತ್ತಮ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬ ಯುವಕನೂ ತನ್ನ ಗೆಲುವನ್ನು ಕಾಣುತ್ತಿದ್ದಾನೆ.2047 ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನೋಡಲು ಬಯಸುವ ಪ್ರತಿಯೊಬ್ಬ ನಾಗರಿಕನು ಅದನ್ನು ಯಶಸ್ಸು ಎಂದು ಪರಿಗಣಿಸುತ್ತಾನೆ” ಎಂದರು.
Related Articles
Advertisement
”ತೆಲಂಗಾಣದ ಜನತೆಗೆ ಮತ್ತು ತೆಲಂಗಾಣದ ಬಿಜೆಪಿ ಕಾರ್ಯಕರ್ತರಿಗೆ ನಾನು ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ತೆಲಂಗಾಣದಲ್ಲಿ ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಗ್ರಾಫ್ ನಿರಂತರವಾಗಿ ಹೆಚ್ಚುತ್ತಲೇ ಇದೆ. ತೆಲಂಗಾಣ ಜನತೆಗೆ ನಾನು ಭರವಸೆ ನೀಡುತ್ತೇನೆ, ನಿಮ್ಮ ಸೇವೆಯಲ್ಲಿ ಬಿಜೆಪಿ ಯಾವುದೇ ಕೊರತೆ ಮಾಡುವುದಿಲ್ಲ” ಎಂದರು.
”ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೀ ಅವರು ತಮ್ಮ ನೀತಿ ಮತ್ತು ಕಾರ್ಯತಂತ್ರವನ್ನು ಕಾರ್ಯಗತಗೊಳಿಸಿದ ರೀತಿಯ ಫಲಿತಾಂಶವೂ ಈ ವಿಜಯವಾಗಿದೆ.ಚುನಾವಣೆಯ ಸಮಯದಲ್ಲಿ ಅವರ ಕುಟುಂಬದಲ್ಲಿ ದುರಂತ ಘಟನೆ ಸಂಭವಿಸಿತು, ಆದರೆ ನಡ್ಡಾ ಜಿ ಅವರು ಬಿಜೆಪಿ ಕಾರ್ಯಕರ್ತರಾಗಿ ಹಗಲು ರಾತ್ರಿ ಅಚಲರಾಗಿದ್ದರು” ಎಂದರು.
ಈ ಹ್ಯಾಟ್ರಿಕ್ ಗೆಲುವು 2024 ರ ಹ್ಯಾಟ್ರಿಕ್ ಗೆಲುವಿನ ಗ್ಯಾರಂಟಿ ಎಂದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.