Advertisement

ವಿಕ್ಟರಿ-2ಗೆ 50ರ ಸಂಭ್ರಮ

11:45 AM Dec 20, 2018 | Team Udayavani |

ನಟ ಶರಣ್‌ಗೆ ಈ ವರ್ಷ ಡಬ್ಬಲ್‌ ಧಮಾಕ. ಹೌದು, ಹೀಗೆಂದರೆ ಸಣ್ಣದ್ದೊಂದು ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ ಈ ವರ್ಷ “ರ್‍ಯಾಂಬೋ-2′ ಶತದಿನ ಆಚರಿಸಿಕೊಂಡರೆ, “ವಿಕ್ಟರಿ-2′ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹೌದು, ಹರಿ ಸಂತೋಷ್‌ ನಿರ್ದೇಶನದ “ವಿಕ್ಟರಿ - 2′ 50 ದಿನಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಹದಿನಾಲ್ಕು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ್ದು, ಸುಮಾರು 204 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದೆ. ಆರಂಭದಲ್ಲಿ 242 ಚಿತ್ರಮಂದಿರಗಳಲ್ಲಿ “ವಿಕ್ಟರಿ 2′ ತೆರೆ ಕಂಡಿತ್ತು.

Advertisement

ಬೆಂಗಳೂರಿನ ವೀರೇಶ್‌, ಒರಾಯನ್‌ ಮಾಲ್‌, ಗೋಪಾಲನ್‌ ಮಾಲ್‌, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಇತರೆಡೆ 14 ಚಿತ್ರಮಂದಿರಗಳಲ್ಲಿ ಚಿತ್ರ 50 ದಿನ ಪೂರೈಸಿದೆ ಎಂದು ಖುಷಿಯಿಂದ ಹೇಳುತ್ತಾರೆ ನಿರ್ಮಾಪಕ ತರುಣ್‌ ಶಿವಪ್ಪ. ಈ ಹಿಂದೆ ನಿರ್ಮಾಪಕ ತರುಣ್‌ ಶಿವಪ್ಪ ತಮ್ಮ ತರುಣ್‌ ಟಾಕೀಸ್‌ ಬ್ಯಾನರ್‌ನಲ್ಲಿ “ರೋಜ್‌’, “ಮಾಸ್‌ ಲೀಡರ್‌’ ಚಿತ್ರ ನಿರ್ಮಾಣ ಮಾಡಿದ್ದರು.

“ವಿಕ್ಟರಿ 2′ ಅವರ ನಿರ್ಮಾಣದ ಮೂರನೇ ಚಿತ್ರ. ಶರಣ್‌ಗೆ ಹೊಸ ರೀತಿಯ ಕಥೆ ಹೆಣೆದು, ಮನರಂಜನೆ ಕಟ್ಟಿಕೊಟ್ಟಿದ್ದರಿಂದ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿರ್ಮಾಪಕ ತರುಣ್‌ ಶಿವಪ್ಪ, “ವಿಕ್ಟರಿ 2′ ನನಗೆ ಗೆಲುವು ಕೊಟ್ಟಿದೆ. ಅಷ್ಟೇ ಅಲ್ಲ, ಲಾಭವನ್ನೂ ಮಾಡಿಕೊಟ್ಟಿದೆ. ಹಾಗಾಗಿ, ನಾನು ಮುಂದಿನ ದಿನಗಳಲ್ಲಿ ಎರಡು ಚಿತ್ರಗಳನ್ನು ಒಟ್ಟಿಗೆ ಅನೌನ್ಸ್‌ ಮಾಡುತ್ತೇನೆ’ ಎಂದು ಖುಷಿಯಿಂದ ಹೇಳುತ್ತಾರೆ ತರುಣ್‌ ಶಿವಪ್ಪ.  

Advertisement

Udayavani is now on Telegram. Click here to join our channel and stay updated with the latest news.

Next